ಕುಮಟಾ : ತಾಲೂಕಿನ ಒಟ್ಟೂ 22 ಗ್ರಾಮ ಪಂಚಾಯತ್‌ಗಳ 2 ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟೂ 3 ದಿನಗಳ ಕಾಲಾವಧಿಯಲ್ಲಿ 22 ಪಂಚಾಯತ್‌ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಆಗಸ್ಟ್ 9 ಹಾಗೂ 10 ರಂದು ತಲಾ 8 ಪಂಚಾಯತ್‌ಗಳ ಅಧ್ಯಕ್ಷ ಉಪಾಧ್ಯಕರ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಅಂತೆಯೇ ಇಂದು ಬಾಕಿ ಉಳಿದ 6 ಪಂಚಾಯತ್‌ಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕುಮಟಾದ ಹನೇಹಳ್ಳಿ ಪಂಚಾಯತ್‌ನ ಅಧ್ಯಕ್ಷರಾಗಿ ಸಣ್ಣು ಗೌಡ ಹಾಗೂ ಉಪಾಧ್ಯಕ್ಷರಾಗಿ ಭಾರತಿ ನಾಯ್ಕ ಆಯ್ಕೆಯಾಗಿದ್ದಾರೆ. ಬರ್ಗಿ ಪಂಚಾಯತ್ ಅಧ್ಯಕ್ಷರಾಗಿ ಸಂತೋಷ ಹರಿಕಂತ್ರ ಹಾಗೂ ಉಪಾಧ್ಯಕ್ಷರಾಗಿ ಮಹಾಲಕ್ಷ್ಮಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಂತೆಯೇ ಮಿರ್ಜಾನ ಪಂಚಾಯತ್ ಅಧ್ಯಕ್ಷರಾಗಿ ಜೋಸ್ಟೀನ್ ಡಿಸೋಜಾ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಹರಿಕಂತ್ರ ಆಯ್ಕೆಯಾಗಿದ್ದಾರೆ. ಹೊಲನಗದ್ದೆ ಅಧ್ಯಕ್ಷರಾಗಿ ಎಂ.ಎಂ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ಹರಿಕಂತ್ರ, ದೇವಗಿರಿ ಪಂಚಾಯತ್ ಅಧ್ಯಕ್ಷರಾಗಿ ವೀಣಾ ದುರ್ಗೇಕರ ಹಾಗೂ ಉಪಾಧ್ಯಕ್ಷರಾಗಿ ಸುರೇಶ ನಾಯ್ಕ, ಕಲ್ಲಬ್ಬೆ ಪಂಚಾಯತ್ ಅಧ್ಯಕ್ಷರಾಗಿ ಕಮಲಾ ಮುಕ್ರಿ ಹಾಗೂ ಉಪಾಧ್ಯಕ್ಷರಾಗಿ ರವಿ ಹೆಗಡೆ ಆಯ್ಕೆಯಾಗಿದ್ದಾರೆ.

ನಾಡುಮಾಸ್ಕೇರಿ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಈಶ್ವರ ವೆಂಕಟ್ರಮಣ ಗೌಡ ಹಾಗೂ ಉಪಾಧ್ಯಕ್ಷರಾಗಿ ವಿಜಯಾ ನಾಯ್ಕ ಆಯ್ಕೆಯಾದರು. ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶಾಂತ ನಾರಾಯಣ ನಾಯಕ ಉಪಾಧ್ಯಕ್ಷರಾಗಿ ವೆಂಕಮ್ಮ ಮಂಜುನಾಥ ಹರಿಕಂತ್ರ ಆಯ್ಕೆಯಾದರು.

RELATED ARTICLES  ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.

ಬಾಡ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಗೀತಾ ಸುಬ್ರಾಯ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ಹೊಸಬಯ್ಯ ನಾಯ್ಕ ಆಯ್ಕೆಯಾದರು, ಹೆಗಡೆ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಮಂಜುನಾಥ ಗಣೇಶ ಪಟಗಾರ, ಉಪಾಧ್ಯಕ್ಷರಾಗಿ ಆಶಾ ಶ್ರೀಧರ ನಾಯ್ಕ ಆಯ್ಕೆಯಾದರು.

ವಾಲಗಳ್ಳಿ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಶಾಂತಿ ರಾಮಚಂದ್ರ ಮಡಿವಾಳ, ಉಪಾಧ್ಯಕ್ಷರಾಗಿ ಸುಧಾಕರ ತಿಮ್ಮಣ್ಣ ಗೌಡ ಆಯ್ಕೆಯಾಗಿದ್ದರೆ, ಮೂರೂರು ಗ್ರಾ.ಪಂ ಅಧ್ಯಕ್ಷರಾಗಿ ಭಾರತಿ ಉದಯ ನಾಯ್ಕ, ಉಪಾಧ್ಯಕ್ಷರಾಗಿ ಕೃಷ್ಣ ಹನುಮಂತ ಗೌಡ ಆಯ್ಕೆಯಾಗಿದ್ದಾರೆ.

ಅಳಕೋಡ ಗ್ರಾ.ಪಂ ನೂತನ ಅಧ್ಯಕ್ಷರಾಗಿ ದೇವು ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾಗಿ ಸರೋಜಾ ಸುಬ್ರಾಯ ಭಟ್ಟ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸೊಪ್ಪಿನಹೊಸಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಶೈಲಾ ಗಜಾನನ ನಾಯ್ಕ, ಉಪಾಧ್ಯಕ್ಷರಾಗಿ ಹನುಮಂತ ಕೃಷ್ಣ ಗೌಡ ಆಯ್ಕೆಯಾಗಿದ್ದಾರೆ.

ಗೋಕರ್ಣ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸುಮನಾ ರಾಮಾ ಗೌಡ, ಉಪಾಧ್ಯಕ್ಷರಾಗಿ ನಾತಾಲಾ ದಿನ್ನಿ ರೆಬೆಲೊ ಆಯ್ಕೆಯಾಗಿದ್ದಾರೆ.

RELATED ARTICLES  ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ

ತೊರ್ಕೆ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆನಂದ ನಾಗಪ್ಪ ಕವರಿ, ಉಪಾಧ್ಯಕ್ಷರಾಗಿ ಪ್ರಶಾಂತಿ ದೀಪಕ ಪರವಾರ ಆಯ್ಕೆಯಾಗಿದ್ದಾರೆ.

ಕಾಗಲ್ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸಾವಿತ್ರಿ ವೆಂಕಟೇಶ ಪಟಗಾರ, ಉಪಾಧ್ಯಕ್ಷರಾಗಿ ಪ್ರಶಾಂತ ಅಶೋಕ ಶೆಟ್ಟಿ ಆಯ್ಕೆಯಾದರು.

ಕೊಡ್ಕಣಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಚಂದ್ರಕಲಾ ರಾಮರಾಯ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀರಾಮ ಮುರ್ಕುಂಡಿ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷರಾಗಿ
ಮಂಜುನಾಥ ಪಾಂಡುರಂಗ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಡೋಂಗರ್ಸಿ ಗಾವಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಜಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಮಂಗಲಾ ಶಂಕರ ಅಡಿಗುಂಡಿ ಉಪಾಧ್ಯಕ್ಷರಾಗಿ ವೈಭವ ಗೋವಿಂದ ನಾಯ್ಕ ಆಯ್ಕೆಯಾದರು.

ದೀವಗಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಜಗದೀಶ ಸುರೇಶ ಭಟ್ಟ, ಉಪಾಧ್ಯಕ್ಷರಾಗಿ ವೀಣಾ ವಿಷ್ಣು ಗೌಡ ಆಯ್ಕೆಯಾಗಿದ್ದಾರೆ.

ಸಂತೇಗುಳಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಂಡಾಯ ಕಾಂಗ್ರೆಸ್ ಹಾಗೂ ಬಿಜೆಪಿಯ ಬೆಂಬಲದೊಂದಿಗೆ ಮಹೇಶ ನಾಯ್ಕ, ಉಪಾಧ್ಯಕ್ಷರಾಗಿ ಶೈಲಾ ಜಯರಾಮ ಗೌಡ ಆಯ್ಕೆಯಾಗಿದ್ದಾರೆ.