ಹೊನ್ನಾವರ : ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಯಾವ ಗ್ರಾ.ಪಂ ಗೆ ಯಾರು ಅಧ್ಯಕ್ಷರು ಎಂಬ ವಿವರ ಇಲ್ಲಿದೆ.

ಕಡ್ಲೆ ಗ್ರಾ.ಪಂ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ಟ, ಉಪಾಧ್ಯಕ್ಷರಾಗಿ ನಾಗರಾಜ (ಗಣಪತಿ) ಭಾಗ್ವತ ನೀಲಕೋಡ, ಹಳದೀಪುರ ಗ್ರಾ.ಪಂ ಅಧ್ಯಕ್ಷರಾಗಿ ಪುಷ್ಪಾ ಮಹೇಶ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಅಜೀತ ಮುಕುಂದ ನಾಯ್ಕ, ನವೀಲಗೋಣ ಗ್ರಾ.ಪಂ ಅಧ್ಯಕ್ಷರಾಗಿ ಮಹಾದೇವಿ ಸುರೇಶ ನಾಯ್ಕ, ಉಪಾಧ್ಯಕ್ಷರಾಗಿ ಎನ್.ವಿ.ಸತೀಶ ಹೆಬ್ಬಾರ ಆಯ್ಕೆಯಾದರು.

ಸಾಲಕೋಡ ಗ್ರಾ.ಪಂ ಅಧ್ಯಕ್ಷರಾಗಿ ಯಮುನಾ ಕೃಷ್ಣಮೂರ್ತಿ ನಾಯ್ಕ, ಬಾಲಚಂದ್ರ ಗೋವಿಂದ ನಾಯ್ಕ, ಕಡತೋಕಾ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸಾವಿತ್ರಿ ಕೃಷ್ಣ ಭಟ್ಟ, ಉಪಾಧ್ಯಕ್ಷರಾಗಿ ಲಕ್ಷ್ಮೀ ಶ್ರೀಕಾಂತ ಮಡಿವಾಳ, ಚಂದಾವರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪ್ರೇಮಾ ಮೋಹನ ನಾಯ್ಕ, ಉಪಾಧ್ಯಕ್ಷರಾಗಿ ನಿರ್ಮಲಾ ಜುವಾಂವ ಡಯಾಸ ಆಯ್ಕೆಯಾದರು.

ಹೊಸಾಕುಳಿ ಗ್ರಾ.ಪಂ ಅಧ್ಯಕ್ಷರಾಗಿ ಸುರೇಶ ಗಣಪತಿ ಶೆಟ್ಟಿ, ಉಪಾಧ್ಯಕ್ಷರಾಗಿ ಮಾದೇವಿ ಗಣಪು ಮುಕ್ರಿ, ಕರ್ಕಿ ಗ್ರಾ.ಪಂ ಅಧ್ಯಕ್ಷರಾಗಿ ವೀಣಾ ಗಣೇಶ ಶೇಟ್, ಉಪಾಧ್ಯಕ್ಷರಾಗಿ ವಿನೋದ ವೆಂಕಟೇಶ ನಾಯ್ಕ ಆಯ್ಕೆಯಾಗಿದ್ದಾರೆ.

RELATED ARTICLES  ಅಂಗನವಾಡಿ ಕಟ್ಟಡ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ : ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ : ಪಾಲಕರು ಹಾಗೂ ಮಕ್ಕಳಿಂದ ಪ್ರೊಟೆಸ್ಟ್.

ಹಡಿನಬಾಳ ಗ್ರಾ.ಪಂ ಅಧ್ಯಕ್ಷರಾಗಿ ವೆಂಕಟೇಶ ಕನ್ಯಾ ಗೌಡ, ಉಪಾಧ್ಯಕ್ಷರಾಗಿ ಸುನೀತಾ ನಾಗರಾಜ ಶೇಟ್, ಮುಗ್ವಾ ಗ್ರಾ.ಪಂ ಅಧ್ಯಕ್ಷರಾಗಿ ಈಶ್ವರ ವೆಂಕ್ಟ ನಾಯ್ಕ, ಉಪಾಧ್ಯಕ್ಷರಾಗಿ ವಿದ್ಯಾ ಉದಯ ಮೇಸ್ತ, ಮಾವಿನಕುರ್ವಾ ಗ್ರಾ.ಪಂ ಅಧ್ಯಕ್ಷರಾಗಿ ಪೀಟರ್ (ಮಿನಿನ್) ಅಂತೋನ್ ಮೆಂಡೊನ್ಸಾ ಉಪಾಧ್ಯಕ್ಷರಾಗಿ ಸವಿತಾ ವೆಂಕಟೇಶ ನಾಯ್ಕ ಆಯ್ಕೆಯಾಗಿದ್ದಾರೆ.

ಕೆಳಗಿನೂರು ಗ್ರಾ.ಪಂ ಅಧ್ಯಕ್ಷರಾಗಿ ಚಿತ್ರಾಕ್ಷಿ ಹನ್ಮಂತ ಗೌಡ, ಉಪಾಧ್ಯಕ್ಷರಾಗಿ ಸುರೇಶ ಮಂಜು ಗೌಡ, ಚಿಕ್ಕನಕೋಡ ಗ್ರಾ.ಪಂ ಅಧ್ಯಕ್ಷರಾಗಿ ಶ್ಯಾಮಲಾ ಜ್ದೀಶ ನಾಯ್ಕ, ಉಪಾಧ್ಯಕ್ಷರಾಗಿ ಮಾಲಿನಿ ಜೈನ ಆಯ್ಕೆಯಾಗಿದ್ದಾರೆ.

ಜಲವಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಸುರೇಶ ವಾಮನ ನಾಯ್ಕ, ಉಪಾಧ್ಯಕ್ಷರಾಗಿ ಲತಾ ಮಂಜುನಾಥ ಪೂಜಾರಿ, ಖರ್ವಾ ಗ್ರಾ.ಪಂ ಅಧ್ಯಕ್ಷರಾಗಿ ಶ್ರೀಧರ ನಾರಾಯಣ ನಾಯ್ಕ, ಉಪಾಧ್ಯಕ್ಷರಾಗಿ ಪವಿತ್ರಾ ನಾಗಪ್ಪ ಹಳ್ಳೇರ, ಹೆರಂಗಡಿ ಗ್ರಾ.ಪಂ ಅಧ್ಯಕ್ಷರಾಗಿ ಮೇರಿ ಬನಿಪಾಸ್ ಡಯಾಸ್, ಉಪಾಧ್ಯಕ್ಷರಾಗಿ ಲೋಕೇಶ ಗಣಪಯ್ಯ ನಾಯ್ಕ ಆಯ್ಕೆಯಾಗಿದ್ದಾರೆ.

RELATED ARTICLES  ಚಾಕಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಮಗು…!

ಕುದ್ರಿಗಿ ಗ್ರಾ.ಪಂ ಅಧ್ಯಕ್ಷರಾಗಿ ಮಹ್ಮದ್ ಫೈಸಲ್ ಬಾವಾ, ಉಪಾಧ್ಯಕ್ಷರಾಗಿ ಫಿಲೋಮಿನಾ ಮಿರಾಂಡಾ, ನಗರಬಸ್ತಿಕೇರಿ ಗ್ರಾ.ಪಂ ಅಧ್ಯಕ್ಷರಾಗಿ ಸುನಿತಾ ಶ್ರೀಧರ ಹೆಗಡೆ, ಉಪಾಧ್ಯಕ್ಷರಾಗಿ ಮಂಜುನಾಥ ಮಾದೇವ ನಾಯ್ಕ, ಉಪ್ಪೋಣಿ ಗ್ರಾ.ಪಂ ಅಧ್ಯಕ್ಷರಾಗಿ ಗಣೇಶ ತಿಮ್ಮಯ್ಯ ನಾಯ್ಕ, ಉಪಾಧ್ಯಕ್ಷರಾಗಿ ಮಾದೇವಿ ಮಾದೇವ ಉಪ್ಪಾರ

ಮಾಗೋಡ ಗ್ರಾ.ಪಂ ಅಧ್ಯಕ್ಷರಾಗಿ ಶಿವರಾಮ ರಾಮ ಹೆಗಡೆ, ಉಪಾಧ್ಯಕ್ಷರಾಗಿ ಜಯಂತಿ ರಾಮಕೃಷ್ಣ ನಾಯ್ಕ, ಕೊಡಾಣಿ ಗ್ರಾ.ಪಂ ಅಧ್ಯಕ್ಷರಾಗಿ ತಿಮ್ಮಪ್ಪ ನಾಗಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಸುಲೋಚನಾ ಧರ್ಮಾ ನಾಯ್ಕ ಆಯ್ಕೆಯಾಗಿದ್ದಾರೆ.

ಕಾಸರಕೋಡ ಗ್ರಾ.ಪಂ ಅಧ್ಯಕ್ಷರಾಗಿ ಮಂಕಾಳಿ ಹರಿಜನ, ಉಪಾಧ್ಯಕ್ಷರಾಗಿ ಗಣಪಿ ಗೌಡ, ಮೇಲಿನ ಇಡಗುಂಜಿ ಗ್ರಾ.ಪಂ ಅಧ್ಯಕ್ಷರಾಗಿ ಲಕ್ಷ್ಮೀ ಅಮಕೂಸ ಗೌಡ, ಉಪಾಧ್ಯಕ್ಷರಾಗಿ ಗೋಪಾಲ ಜಟ್ಟಿ ನಾಯ್ಕ, ಬಳಕೂರು ಗ್ರಾ.ಪಂ ಅಧ್ಯಕ್ಷರಾಗಿ ಭಾಗೀರತಿ ನಾಗಪ್ಪ ಗೊಂಡ, ಉಪಾಧ್ಯಕ್ಷರಾಗಿ ಶಾಂತಿ ನಾಗಪ್ಪ ನಾಯ್ಕ ಆಯ್ಕೆಯಾಗಿದ್ದಾರೆ.