ಕುಮಟಾ : ತಾಲೂಕಿನ ಮಾಸ್ತಿಕಟ್ಟೆ ಸರ್ಕಲ್ ಬಳಿ ವ್ಯಕ್ತಿಯೋರ್ವರು ಬ್ಯಾಗ್ ಕಳೆದುಕೊಂಡಿದ್ದು, ಕಳೆದುಕೊಂಡ ಬ್ಯಾಗ್ ಅನ್ನು ಕುಮಟಾ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಬೆಟ್ಕುಳಿಯ ಹಲೀಮ್ ಶೌಕತ್ ಶೇಖ್ ಎಂಬುವವರ ಬ್ಯಾಗ್ ಇದಾಗಿದ್ದು, ಆ. 10 ರಂದು ಮಾಸ್ತಿಕಟ್ಟೆ ಸರ್ಕಲ್ ಬಳಿ  ಕಳೆದುಹೊಗಿತ್ತು. ಬ್ಯಾಗ್‌ನಲ್ಲಿ ಎಟಿಎಂ, ಪಾನ್ ಕಾರ್ಡ, ಹಾಗೂ ನಗದು ಸೇರಿದಂತೆ ಇತರ ಪ್ರಮುಖವಾದ ದಾಖಲಾತಿಗಳಿದ್ದವು.

RELATED ARTICLES  ಅಂಕೋಲಾ ಹೊನ್ನಾರಾಕಾ ನಾಗದೇವತಾ ದೇವಸ್ಥಾನದಲ್ಲಿ "ಹೊಸ್ತು ಹಬ್ಬ"

ಕುಮಟಾ ಪೊಲೀಸ್ ಠಾಣೆಯ ಎ.ಎಸ್.ಐ ನಾಗಾನಂದ ನೆಗಳೂರು ಹಾಗೂ ಪ್ರದೀಪ ನಾಯಕ ಅವರು ವಾರಸುದಾರರಿಗೆ ಬ್ಯಾಗ್ ಹಸ್ತಾಂತರಿಸಿದ್ದು, ಈ ಕಾರ್ಯಕ್ಕೆ ವಾರಸುದಾರರು ಸೇರಿದಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ಪಾಠೋಪಕರಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ