ಕುಮಟಾ : ತಾಲೂಕಿನ ಹೊಲನಗದ್ದೆಯ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಮುಖಂಡ ಎಂ. ಎಂ. ಹೆಗಡೆ ಆಯ್ಕೆಯಾಗಿದ್ದಾರೆ. ಸತತವಾಗಿ 5 ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಆ ವೇಳೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದರು. ಇದೀಗ 6. ನೇ ಬಾರಿಗೆ ಸದಸ್ಯರಾಗಿರುವ ಅವರು ಅಧ್ಯಕ್ಷರಾಗಿ ಹೊಲನಗದ್ದೆ ಗ್ರಾಮ ಪಂಚಾಯತ್ ಸಾರಥ್ಯ ವಹಿಸಿಕೊಂಡಿದ್ದಾರೆ.

ಎಂ.ಎಂ. ಹೆಗಡೆಯವರು ಈ ಹಿಂದೆ ಮಂಡಲ ಪಂಚಾಯತ್ ಇರುವಾಗಿನಿಂದಲೂ ಹೊಲನಗದ್ದೆ ಭಾಗದ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಹಿಂದೆ ಅಧ್ಯಕ್ಷರಾಗುವ ಅವಕಾಶ ಅವರಿಗೆ ಬಂದಿದ್ದರೂ ರಾಜಕೀಯ ಕುತಂತ್ರದಿಂದ ಅಧ್ಯಕ್ಷ ಪಟ್ಟದಿಂದ ಅವರು ವಂಚಿತರಾಗಿದ್ದರು.

RELATED ARTICLES  ಉದ್ಘಾಟನೆಗೊಂಡಿತು ನಿಮ್ಮ ಮನೆಯ ಛಾಯಾಚಿತ್ರ ಸ್ಪರ್ಧೆ

ಇದೀಗ ಹೊಲನಗದ್ದೆ ಪಂಚಾಯತದಲ್ಲಿ ತಮ್ಮ 6ನೇ ಬಾರಿ ಗೆಲುವು ಸಾಧಿಸಿರುವ ಅವರು, ಗ್ರಾ.ಪಂ ಅಧ್ಯಕ್ಷರ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು. 

ಜನತಾ ದಳದ ಮೂಲಕ ರಾಜಕಾರಣಕ್ಕೆ ಬಂದಿರುವ ಎಂ. ಎಂ. ಹೆಗಡೆ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ. ಯಲ್ಲಾಪುರ ಸಂಕಲ್ಪ ಅಧ್ಯಕ್ಷ ಹಾಗೂ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಪ್ರಮೋದ ಹೆಗಡೆ ಹಾಗೂ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರ ನಿಕಟವರ್ತಿಗಳಾಗಿದ್ದರು. ಈಗ ಅವರು ಕಳೆದ ಕೆಲ ವರ್ಷಗಳಿಂದ ಬಿಜೆಯಲ್ಲಿ ಸಕ್ರಿಯಾಗಿದ್ದಾರೆ ಹಾಗೂ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಶಾಸಕ ದಿನಕರ ಶೆಟ್ಟಿಯವರ ಆಪ್ತರಾಗಿಯೂ ಇವರು ಗುರುತಿಸಿಕೊಂಡವರು. 

RELATED ARTICLES  ಹಿಂದು ಜನ ಜಾಗ್ರತಿ ಸಮಿತಿಯಿಂದ ಮನವಿ

ಇದೀಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಇವರು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಜನರಿಗೆ ಅತ್ಯಂತ ಅವಶ್ಯಕವಾದ ಕಾರ್ಯ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವ ಕನಸು ಹೊತ್ತಿದ್ದಾರೆ.