ಕುಮಟಾ : ತಾಲೂಕಿನ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.  ನೂತನ ಅಧ್ಯಕ್ಷರಾಗಿ ನ್ಯಾಯಾಂಗ ಇಲಾಖೆಯ ಆರ್ ಡಿ ನಾಯ್ಕ,  ಗೌರವಾಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ರವೀಂದ್ರ ಭಟ್ ಸೂರಿ,  ರಾಜ್ಯ ಪರಿಷತ್ ಸದಸ್ಯರಾಗಿ ಬೊಮ್ಮಯ್ಯ ನಾಯಕ್, ಉಪಾಧ್ಯಕ್ಷರಾಗಿ ತಾಲೂಕ್ ಪಂಚಾಯತ್ ನ ಎಂ ಎಂ ಹೆಗಡೆ,  ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ ಟಿ ನಾಯ್ಕ,  ಮಹಿಳಾ ಉಪಾಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಶ್ರೀಮತಿ ಭಾಗೀರಥಿ ನಾಯ್ಕ,  ಕೋಶಾಧ್ಯಕ್ಷರಾಗಿ ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಮುಕುಂದ ಮಡಿವಾಳ,  ಪ್ರಧಾನ ಕಾರ್ಯದರ್ಶಿಗಳಾಗಿ ಗುರುದಾಸ್ ಮಹಾಲೆ,  ಹಿರಿಯ ಮಾರ್ಗದರ್ಶಕರಾಗಿ ಪಶುಸಂಗೋಪನ ಇಲಾಖೆಯ ಡಾ. ವಿಶ್ವನಾಥ್ ಹೆಗಡೆ, ಸಂಘಟನಾ ಕಾರ್ಯದರ್ಶಿಯಾಗಿ  ಗಣಪತಿ ಮುಕ್ರಿ,  ಜಂಟಿ ಕಾರ್ಯದರ್ಶಿಯಾಗಿ ಅರಣ್ಯ ಇಲಾಖೆಯ ಬಿ ಎನ್ ಬಂಕಾಪುರ,  ಸಹ ಕಾರ್ಯದರ್ಶಿಯಾಗಿ ಶಿಕ್ಷಣ ಇಲಾಖೆಯ ಗೋಪಾಲ್ ಪಟಗಾರ,  ಆಂತರಿಕ ಲೆಕ್ಕಪರಿಶೋಧಕರಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿನಾಯಕ್ ಸಿದ್ದಾಪುರ,  ಕ್ರೀಡಾ ಕಾರ್ಯದರ್ಶಿಯಾಗಿ ಮೀನುಗಾರಿಕಾ ಇಲಾಖೆಯ ರುದ್ರಗೌಡ ಪಾಟೀಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಖಜಾನೆ ಇಲಾಖೆಯ ವಿನಾಯಕ ಭಂಡಾರಿ  ಅಧಿಕಾರ ಸ್ವೀಕರಿಸಿದರು.  

RELATED ARTICLES  ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್..!

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಆರ್ ಡಿ ನಾಯ್ಕ” ಎಲ್ಲರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ನೌಕರರ ಹಿತವನ್ನು ಕಾಯುವ ಕಾರ್ಯ ಮಾಡುವುದಾಗಿ” ತಿಳಿಸಿದರು.  ಗೌರವಾಧ್ಯಕ್ಷರಾದ ರವೀಂದ್ರ ಭಟ್ ಸೂರಿ ಮಾತನಾಡಿ ನಾವು ಮೊದಲು ನಮ್ಮ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ನೌಕರರಿಗೆ ಸಿಗಬೇಕಾದ  ಸೌಲಭ್ಯಗಳು ಅವರಿಗೆ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಆ ನಿಟ್ಟಿನಲ್ಲಿ ನೂತನ ಸಮಿತಿ ಕಾರ್ಯಾಚರಿಸಲಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಗುರುದಾಸ ಮಹಾಲೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES  ಪಾದಾಚಾರಿಗೆ ಬಡಿದ ಕಾರು : ಗಂಭೀರ ಗಾಯ