ಕುಮಟಾ : ಹವ್ಯಕ ಸೇವಾ ಪ್ರತಿಷ್ಠಾನ ಉತ್ತರಕನ್ನಡ ಹಾಗೂ ಹವ್ಯಕ ಸಮಾಜ ಸೇವಾ ಸಂಘ, ಗುಡೇಅಂಗಡಿ ಸಂಸ್ಥೆಗಳ ಸಹಯೋಗದಲ್ಲಿ ಅ. ೧೫ ರ ಮಂಗಳವಾರ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಸಂಜೆ ೪ ಗಂಟೆಯಿಂದ ಹೊಲನಗದ್ದೆಯ ಹವ್ಯಕ ಸಭಾ ಭವನದಲ್ಲಿ “ಚಂದ್ರಹಾಸ ಚರಿತ್ರೆ ” ಯಕ್ಷಗಾನ ನಡೆಯಲಿದೆ.
ಈ ಸಂದರ್ಭದಲ್ಲಿ “ಯಕ್ಷ ಸಂಪದ” ಸಂಘಟನೆಯ ಸಂಸ್ಥಾಪಕರುಗಳಾದ ದಿ. ಕೆ. ಟಿ. ಭಟ್ಟ ಮತ್ತು ದಿ. ಎನ್. ಎಸ್. ಭಟ್ಟ ಇವರುಗಳ ಸಂಸ್ಮರಣೆ ನಡೆಯಲಿದೆ. ನಂತರದಲ್ಲಿ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಮಹಾಮಂತ್ರಿ ದುಷ್ಟಬುದ್ಧಿ (ಚಂದ್ರಹಾಸ ಚರಿತ್ರೆ) ಯಕ್ಷಗಾನ ನಡೆಯುವುದು .
ಹಿಮ್ಮೇಳದಲ್ಲಿ ಭಾಗವತರಾಗಿ ಉಮೇಶ ಭಟ್ಟ ಬಾಡ ಹಾಗೂ ಸರ್ವೇಶ್ವರ ಹೆಗಡೆ, ಮದ್ದಳೆಯಲ್ಲಿ ಮಂಜುನಾಥ ಕಂಚಿಕೈ ಮತ್ತು ಸುಬ್ರಹ್ಮಣ್ಯ ಭಟ್ಟ ಬಾಡ, ಹಾಗೂ ಗಜಾನನ ಹೆಗಡೆ ಸಾಂತೂರು ಇವರು ಚಂಡೆವಾದಕರಾಗಿ ಪಾಲ್ಗೊಳ್ಳುವರು. ಮುಮ್ಮೇಳ ಕಲಾವಿದರಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ವಿನಯ ಬೇರೊಳ್ಳಿ, ಕಾರ್ತಿಕ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದರ್ಶನ ಭಟ್, ಗುರುಪ್ರಸಾದ ಭಟ್ಟ ಮತ್ತು ನಾಗೇಂದ್ರ ಮೂರೂರು ಇವರುಗಳು ಭಾಗವಹಿಸಲಿದ್ದಾರೆ.
ಅಪರೂಪದ ಈ ಯಕ್ಷಗಾನ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

RELATED ARTICLES  ಉತ್ತರಕನ್ನಡದಾದ್ಯಂತ ನಾಳೆಯೂ ಶಾಲೆಗಳಿಗೆ ರಜೆ : ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಅವಾಂತರ : ಜಿಲ್ಲಾಧಿಕಾರಿಗಳಿಂದ ಮಾಹಿತಿ.