ಕುಮಟಾ : ಇತ್ತೀಚಿನ ದಿನದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳ ನೋಂದಣಿ ಕಡಿಮೆಯಾಗುತ್ತಿದ್ದರೂ, ಚಿತ್ರಗಿ ಶಾಲೆಗೆ ಹೆಚ್ಚು ಜನ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇದು ಶಾಲಾ ಅಭಿವೃದ್ಧಿಯ ಒಂದು ಮಹತ್ವದ ಹೆಜ್ಜೆ. ಮುಂಬರುವ ದಿನದಲ್ಲಿ ಇಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ನಾವು ಪ್ರಯತ್ನಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್ ಭಟ್ಟ ಹೇಳಿದರು. ಅವರು ಚಿತ್ರಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟ್ ನೇತ್ರತ್ವದಲ್ಲಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಚಿತ್ರಗಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಆಯುರ್ವೇದ ಚಿಕಿತ್ಸೆ, ಉಚಿತ ಔಷಧ ವಿತರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಶಾಲೆಯೊಂದು ಅಭಿವೃದ್ಧಿಯಾಗಲು ಸುತ್ತಲ ಜನರ ಸಹಕಾರ ಅಗತ್ಯವಾಗಿದೆ. ಹಿಂದೆ ಕಲಿತ ವಿದ್ಯಾರ್ಥಿಗಳು ಶಾಲೆಗಾಗಿ ದುಡಿಯುತ್ತಿರುವುದು ಸಂತಸ ತಂದಿದೆ. ಈ ತರದ ಒಗ್ಗಟ್ಟಿನ ಕಾರ್ಯಕ್ರಮ ಮಾಡುವುದರಿಂದ ಒಂದು ಸರ್ಕಾರಿ ಶಾಲೆ ಮಾದರಿಯ ಶಾಲೆಯಾಗಿ ಇತರ ಶಾಲೆಗಳಿಗೆ ಒಂದು ಆದರ್ಶವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಮತ್ತು ರೋಟರಿಯ ಅಸಿಸ್ಟೆಂಟ್ ಗವರ್ನರ್ ವಸಂತ ರಾವ್ ತಮ್ಮ ಎಲ್ಲ ಸಹಕಾರವನ್ನು ಇಂತಹ ಅಭಿವೃದ್ಧಿ ಪರ ಶಾಲೆಗಳಿಗೆ ನೀಡುವುದಾಗಿ ಘೋಷಿಸಿದರು.

RELATED ARTICLES  ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಗೆ ಅರ್ಜಿ ಸಲ್ಲಿಕೆ.


ಡಾಕ್ಟರ ಎಂ.ಎಸ್ ಅವಧಾನಿಯವರು ಆಯುರ್ವೇದದ ಮಹತ್ವ ಮತ್ತು ಉಪಯೋಗವನ್ನು ವಿವರಿಸುತ್ತಾ, ಆಯುರ್ವೇದ ಸುಸ್ತಿರ ಸಮಾಜಕ್ಕೆ ಸೋಪಾನವಾಗಬಲ್ಲದು ಎಂದ ಅವರು, ಆಯುರ್ವೇದದ ಸಿದ್ಧಾಂತವು ಮಾನವ ದೇಹವನ್ನು ಪರಿಸರದ ಭಾಗವಾಗಿ ನೋಡುತ್ತದೆ, ಅಂದರೆ ಪರಿಸರದಲ್ಲಿನ ಯಾವುದೇ ಬದಲಾವಣೆಗಳು ಮಾನವ ದೇಹದ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳಲ್ಲಿ ಪ್ರಕಟವಾಗುತ್ತದೆ. ಆಧುನಿಕ ಔಷಧ ಪದ್ಧತಿಗೆ ವಿರುದ್ಧವಾಗಿ, ಆಯುರ್ವೇದ ಚಿಕಿತ್ಸೆಗಳು ಪ್ರಕೃತಿಯ ಶಕ್ತಿಯನ್ನು ಮತ್ತು ದೇಹದ ಅಂತರ್ಗತ ಗುಣಗಳನ್ನು ಸ್ವತಃ ಗುಣಪಡಿಸಲು ಬಳಸಿಕೊಳ್ಳುತ್ತವೆ ಎಂದರು.

RELATED ARTICLES  ನಾಮಧಾರಿ ಸಂಘ ಮತ್ತು ಸಮುದಾಯ ಸಂಘಗಳ ಸಹಕಾರದಲ್ಲಿ ಪ್ರತಿಭಾ ಪುರಸ್ಕಾರ


ಕಾರ್ಯಕ್ರಮದಲ್ಲಿ ಹಾಜರಿದ್ದು ಮಾರ್ಗದರ್ಶನ ಮಾಡಿದ ಡಾ. ಎಂಎಸ್ ಅವಧಾನಿ, ಡಾ. ರಾಘವೇಂದ್ರ ನಾಯಕ್, ಡಾ. ಗಿರೀಶ ನಾಯಕ್, ಡಾ. ವಾಹಿನಿ ನಾಯಕ್, ಡಾ. ಪ್ರಸನ್ನ, ಡಾ. ಸಹನಾ ಹೆಗಡೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಘಟಕರಲ್ಲಿ ಪ್ರಮುಖರಾದ ಸುರೇಶ್ ಭಟ್ ಕಾರ್ಯಕ್ರಮದ ಕುರಿತಾಗಿ ಸಮಗ್ರ ವಿವರಣೆ ನೀಡಿ, ಪ್ರಾಸ್ತಾವಿಕ ಮಾತನ್ನಾಡಿದರು. ಟ್ರಸ್ಟಿನ ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು. ಶಂಕರ್ ನಾಯಕ ವಂದಿಸಿದರು. ಮಾರುತಿ ನಾಯಕ್ ಸಹಕರಿಸಿದರು. ೨೭೮ ಜನರು ಈ ಶಿಬಿರದ ಪ್ರಯೋಜನ ಪಡೆದರು.


ಇದೇ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಅವಕಾಶ ಮಾಡಿಕೊಡಬೇಕೆಂಬ ಮನವಿಯನ್ನು ಶಾಲಾ ಅಭಿವೃದ್ಧಿ ಸಂಘ ಮತ್ತು ಶತಮಾನೋತ್ಸವ ಸಮಿತಿಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನವೀಕೃತ ಶಾಲಾ ಮುಖ್ಯೋಧ್ಯಾಪಕರ ಕೊಠಡಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸಿದರು.