ಹೊನ್ನಾವರ: ರೋಟರಿ ಭವನ ಹೊನ್ನಾವರದಲ್ಲಿ ರೋಟರಾಕ್ಟ ಕ್ಲಬ್ ಮತ್ತು ಇಂಟರಾಕ್ಟ ಕ್ಲಬ್ ಇದರ ಇನಸ್ಟಾಲೇಶನ್ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವವನ್ನು ಅಭಿವೃದ್ದಿಗೊಳಿಸುವ ಉದ್ದೇಶದಿಂದ ಶಾಲೆಗಳಲ್ಲಿ ರೋಟರಾಕ್ಟ ಕ್ಲಬ್ ಮತ್ತು ಇಂಟರಾಕ್ಟ ಕ್ಲಬ್ ಸ್ಥಾಪಿಸಿ ಇಂದು ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆಯನ್ನು ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು.

RELATED ARTICLES  ಗ್ರೇಡ್- 2 ದೈಹಿಕ ಶಿಕ್ಷಕರ ಸಂಘಕ್ಕೆ ಸಂಪೂರ್ಣ ಬೆಂಬಲ- ಷಡಾಕ್ಷರಿ

ರೋಟರಿ ಕ್ಲಬ್ ಹೊನ್ನಾವರದ ಅಧ್ಯಕ್ಷರಾದ ದೀಪಕ ಲೋಪಿಸ್‍ರವರು ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಯಾಗಿ ಝೆಡ್.ಆರ್. ಆರ್. ರೋಟರಾಕ್ಟ ಕ್ಲಬ್ ಮತ್ತು ಇಂಟರಾಕ್ಟ ಕ್ಲಬ್ ಭಟ್ಕಳದ ಅದ್ಯಕ್ಷರಾದ ರೊ. ವೈಷ್ಣವಿ ನಾಯ್ಕರವರು ಆಗಮಿಸಿದ್ದರು.

RELATED ARTICLES  ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ.

ರೊ. ಗಣೆಶ ಹೆಬ್ಬಾರರವರು ವಿದ್ಯಾರ್ಥಿ ಕ್ಲಬ್ ಇನಸ್ಟಾಲ್ಲೇಶನ್ ಪ್ರಕ್ರಿಯೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 16 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.