ಹೊನ್ನಾವರ: ಅಕ್ರಮವಾಗಿ ಮುಳ್ಳುಹಂದಿಯನ್ನು ಬೇಟೆಯಾಡಿ ಬೈಕ್‌ನಲ್ಲಿ ಸಾಗಿಸುತ್ತಿರುವಾಗ ಕುಮಟಾ ತಾಲೂಕಿನ ಕತಗಾಲ ಹರೀಟಾ ಗ್ರಾಮದ ಆನೆಗುಂದಿ ಕ್ರಾಸ್ ಹತ್ತಿರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಬೈಕ್ ಹಾಗೂ ಮುಳ್ಳು ಹಂದಿಯ ಮೃತದೇಹವನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.


ದೀವಳ್ಳಿ ಗ್ರಾಮದ ಸಂಜಯ ದಿನ್ನಿ ನೊರೊನಾ (೨೫) ಹಾಗೂ ಪ್ರಕಾಶ ಪ್ರಾನ್ಸಿಸ್ ರೊಡ್ರಗಿಸ್ (೩೯) ಬಂಧಿತರು. ಮತ್ತೊಬ್ಬ ಆರೋಪಿ ಹೆಬ್ಬೈಲ್ ಗ್ರಾಮದ ಸಂದೀಪ ನಾಗೇಶ ನಾಯ್ಕ ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆದಿದೆ.
ಹೊನ್ನಾವರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಮಾರ್ಗದರ್ಶನದಲ್ಲಿ ಕತಗಾಲ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಬಿ. ಎನ್. ಬಂಕಾಪುರ, ವಸಂತಕುಮಾರ ಗೌಡ, ಹರಿಶ್ಚಂದ್ರ ಮುಕುಂದ ಪಟಗಾರ ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ, ದಿನೇಶ ಪಡುವಣಿ, ಗಣೇಶ ನಾಯಕ, ಸದಾಶಿವ ಪುರಾಣಿಕ ಇತರರು ಇದ್ದರು. ದಸ್ತಗಿರಿಯಾದ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

RELATED ARTICLES  ಗಣಪಂಗೇ ಪತ್ರ ಬರೆದ ಭೂಪ..! ಆತನ ನಿವೇದನೆಯ ರೀತಿ ಸಖತ್ ವೈರಲ್..!