ಮುರ್ಡೇಶ್ವರ : ಸಮುದ್ರದಲ್ಲಿ ಈಜಲು ಹೋಗಿ ಪ್ರವಾಸಿಗನೊಬ್ಬ ನೀರುಪಾಲಾಗಿ ಕಾಣೆಯಾಗಿದ್ದು, ಇನ್ನೋರ್ವನನ್ನು ರಕ್ಷಣೆ ಮಾಡಿದ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ. ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಅದೆಷ್ಟೇ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದರೂ ಜನರು ಅಪಾಯ ತಂದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

RELATED ARTICLES  ಮಾತಿನ ಮಹತ್ವ

ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ತುಮಕೂರು ಮೂಲದ 22 ಪ್ರವಾಸಿಗರು ನಿರ್ಬಂದದ ನಡುವೆಯೇ ಸಮುದ್ರಕ್ಕಿಳಿದಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದು ಓರ್ವನನ್ನು ರಕ್ಷಣೆ ಮಾಡಲಾಗಿದೆ.

RELATED ARTICLES  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಸಾವು.

ತುಮಕೂರು ಮೂಲದ ಮಣಿತೇಜಾ(21) ಕಾಣೆಯಾದ ಯುವಕನಾಗಿದ್ದು ಕೋಲಾರದ ಯಶ್ (22) ರಕ್ಷಣೆಗೊಳಗಾದವನಾಗಿದ್ದಾನೆ. ಘಟನೆ ಸಂಬಂಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.