ಯಲ್ಲಾಪುರ: ಮೊಬೈಲ್ ಗೆ ಬಂದ ಮೆಸೇಜ್ ಲಿಂಕ್ ಒತ್ತಿ ವ್ಯಕ್ತಿಯೋರ್ವ ಹಣ ಕಳೆದುಕೊಂಡ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಜಿಗಳಿಹೊಂಡದ ಸಂತೋಷ ಶ್ರೀಪತಿ ಹೆಗಡೆ (39) ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯಕ್ರಮದಲ್ಲಿ ರವೀಂದ್ರ ಭಟ್ಟ ಸೂರಿಯವರಿಗೆ ಸನ್ಮಾನ

ಅಪರಿಚಿತ ವ್ಯಕ್ತಿಯಿಂದ ಸಂತೋಷ್ ಗೆ ಮೆಸೆಜ್ ಬಂದಿದ್ದು, ಮೆಸೇಜ್ ನಲ್ಲಿ ಬ್ಯಾಂಕಿನ ಲೋಗೋ ಇದ್ದಿದ್ದರಿಂದ ಅದನ್ನ ಒತ್ತಿದ್ದಾನೆ. ಇನ್ನು ಮೆಸೇಜ್ ಒಪನ್ ಆಗುತ್ತಿದ್ದಂತೆ ಆತನ ಕ್ರೆಡಿಟ್ ಕಾರ್ಡಿನಿಂದ ಎರಡು ಬಾರಿ ಸುಮಾರು 95,557ರೂ ಹಣ ಕಟ್ ಆಗುವ ಮೂಲಕ ವಂಚನೆಗೊಳಗಾಗಿದ್ದಾನೆ.

RELATED ARTICLES  ಇಡಗುಂಜಿ ಸಮೀಪ ಗಾಂಜಾ ಮಾರಾಟ : ಆರೋಪಿ ಅಂದರ್..!

ಇನ್ನು ಹಣ ಕಟ್ ಆಗುತ್ತಿದ್ದಂತೆ ಸಂಶಯಗೊಂಡು ಬ್ಯಾಂಕಿಗೆ ಕರೆಮಾಡಿ ಕ್ರೆಡಿಟ್ ಕಾರ್ಡನ್ನು ಸ್ಥಗಿತಗೊಳಿಸಿದ್ದು, ಈ ಸಂಭಂದ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾನೆ.