ಕುಮಟಾ : ತಾಲೂಕಾ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕಾ ಆಡಳಿತದ ಸಹಯೋಗದೊಂದಿಗೆ ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ (ಮಣಿಕೆ ಮೈದಾನ) ನಡೆದ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ತೆರಳಿದ ಅವರು, ಪೊಲೀಸ್ ಇಲಾಖೆ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

   ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು ಭಾರತ ದೇಶದ ಜನರು ಸುಂದರ ಶಾಂತಿಯುತ ಬದುಕನ್ನು ರೂಪಿಸಿಕೊಂಡ ದಿನವೇ ಈ ಸ್ವಾತಂತ್ರ‍್ಯ ದಿನ. ೨೦೦ ವರ್ಷಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಸ್ವಾತಂತ್ರ‍್ಯ ಪಡೆಯಲು ೧೫೦ ವರ್ಷಗಳ ಕಾಲದ ಹೋರಾಟ ಬೇಕಾಯಿತು. ಶಾಂತಿಯುತ ಹೋರಾಟ ನಡೆಸಿದ್ದೇವೆಂದು ಹೇಳಿಕೊಂಡರೂ, ಸ್ವಾತಂತ್ರ‍್ಯ ಹೋರಾಟಗಾರರು ಅನುಭವಿಸಿದ ಕಷ್ಟಗಳನ್ನು ಇತಿಹಾಸದ ಪುಟದಿಂದ ತಿಳಿಯಬಹುದು ಎಂದರು.

   ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿಕೊಂಡ ಅವರು, ನಮ್ಮ ಜಿಲ್ಲೆಯ ಅಂಕೋಲಾ ತಾಲೂಕು ಸ್ವಾತಂತ್ರ ಹೋರಾಟದಲ್ಲಿ ತೊಡಗಿಕೊಂಡ ರೀತಿಯನ್ನು ವಿವರಿಸಿದವರು. ಅಂಕೋಲಾದಲ್ಲಿ ಎಂ.ಪಿ ನಾಡಕರ್ಣಿ ಅವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಘಟನಾವಳಿ ಸ್ಮರಿಸಿ, ಅಂತಹ ಜಿಲ್ಲೆಯಲ್ಲಿ ನಾವಿದ್ದೇವೆಂಬ ಎಂಬ ಹೆಮ್ಮೆ ನಮಗಿರಲಿ ಎಂದರು. ಅರ್ಥಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ, ಮೂಲಸೌಕರ್ಯದಲ್ಲಿ ಭಾರತ ಪ್ರಗತಿಯ ಹೆಜ್ಜೆಗಳನ್ನು ಇಡುತ್ತಿದೆ. ಚಂದ್ರಯಾನ -೩ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ವಿವರಿಸಿದ್ದರು.

   ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳನ್ನೂ, ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

   ವೇದಿಕೆಯಲ್ಲಿ ತಾಲೂಕು ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ತಾಲೂಕಾ ಆರೋಗ್ಯಾಧಿಕಾರಿ ಆಜ್ಞಾ ನಾಯಕ, ಡಯಟ್ ನ ಆಡಳಿತಾಧಿಕಾರಿ ಎನ್.ಜಿ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಜಿಲ್ಲಾ ಪಂಚಾಯತದ ಸಂಜೀವ ನಾಯ್ಕ, ಲೋಕೋಪಯೋಗಿ ಇಲಾಖೆಯ ಎಂ.ಪಿ ನಾಯ್ಕ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ವೇದಿಕೆಯಲ್ಲಿದ್ದರು. ತಹಶೀಲ್ದಾರ ಸತೀಶ ಗೌಡ ಸ್ವಾಗತಿಸಿದರು. ಎಂ.ಎA ನಾಯ್ಕ ನಿರೂಪಿಸಿದರು.

   ಮಕ್ಕಳಿಂದ ನಡೆದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳ ಪರೇಡ್ ಜನಮೆಚ್ಚುಗೆಗಳಿಸಿತು. ಪೊಲೀಸ್ ಇಲಾಖೆ ಸಿಬ್ಬಂದಿಗಳು ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಶಿಕ್ಷಕರುಗಳು ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಭಾರತದವರನ್ನು ಜಗತ್ತು ಗೌರವಿಸುವ ಕಾಲ ಬಂದಿದೆ : ಎಂ. ಎಂ. ಹೆಗಡೆ

ಕುಮಟಾ : ಸ್ವಾತಂತ್ರ‍್ಯ ದಿನ ಎಂಬುದು ಭಾರತೀಯರೆಲ್ಲರಿಗೂ ಪವಿತ್ರವಾದ ದಿನ. ಭಾರತದಲ್ಲಿ ಹಿಂದೆ ಹೋರಾಟದ ಮನಸ್ಸುಗಳ ಸಾಂಘಿಕ ಪ್ರಯತ್ನದಿಂದ ನಡೆದ ಹೋರಾಟವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾಲ ಬದಲಾಗುತ್ತಾ ಹೋದರೂ ಭಾರತೀಯರನ್ನು ಜಗತ್ತು ಗೌರವಿಸುವ ಕಾಲ ಮತ್ತೆ ಮತ್ತೆ ಬಂದಿರುವುದು ನಮ್ಮ ಸೌಭಾಗ್ಯ ಎಂದು ಹೊಲನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಎA. ಹೆಗಡೆ ಹೇಳಿದರು. ಅವರು ತಾಲೂಕಿನ ಹೊಲನಗದ್ದೆ ಗ್ರಾ.ಪಂ ಆವರಣದಲ್ಲಿ ನಡೆದ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನಡೆಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜನಸೇವೆಗೆ ಹೊಸದೊಂದು ಅವಕಾಶವನ್ನು ಪಡೆದಿದ್ದೇನೆ. ಭಾರತದ ರಾಷ್ಟ್ರಧ್ವಜದ ಅಡಿಯಲ್ಲಿ ನಿಂತು ಈ ಕಾಲಾವಧಿಯಲ್ಲಿ ಹಿಂದಿನAತೆಯೇ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಪ್ರಮಾಣ ಮಾಡುತ್ತೇನೆ ಎಂದು ಅವರು ಹೇಳಿದರು. ಭಾರತ ವಿಶ್ವವಂದ್ಯವಾಗಿತ್ತು, ಈಗಲೂ ಜಗತ್ತು ಭರತೀಯತೆಯನ್ನು ಒಪ್ಪುತ್ತದೆ. ಸ್ವಾತಂತ್ರö್ಯ ಹೋರಾಟ ಗಮನಿಸಿದರೆ ತ್ಯಾಗಮಯಿ ಹೋರಾಟಗಾರರ ರಕ್ತವೂ ಹರಿದಿದ್ದು ನಾವು ನೋಡಬಹುದು. ಹಲವರು ಬದುಕು ಕೊಟ್ಟು ನಮಗೆ ಪರಕೀಯರಿಂದ ಮುಕ್ತಿ ಕೊಡಿಸಿದ್ದಾರೆ, ಅಂತಹ ಜನರು ವಂದ್ಯರು. ಇಂತಹ ಸ್ವಾತಂತ್ರ‍್ಯವನ್ನು ಉಳಿಸಿಕೊಂಡು ಹೋಗುವ ಜೊತೆಗೆ ಒಗ್ಗಟ್ಟಿನಿಂದ ಎಲ್ಲರೂ ಸೇರಿ ಸುಭದ್ರ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

    ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹೊಲನಗದ್ದೆ ವ್ಯಾಪ್ತಿಯ ಸೈನಿಕರಿಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಮಹಂತೇಶ ಹರಿಕಂತ್ರ, ದತ್ತಾತ್ರೇಯ ಪಟಗಾರ, ಶ್ರೀಕಾಂತ ಮಡಿವಾಳ, ಅನುರಾಧಾ ಭಟ್ಟ, ದೀಪಾ ಹಿಣಿ, ಅನ್ನಪೂರ್ಣಾ ನಾಯ್ಕ, ಸಾವಿತ್ರಿ ಪಟಗಾರ, ಮಾದೇವಿ ಮುಕ್ರಿ, ಚಂದ್ರಹಾಸ ನಾಯ್ಕ ಹಾಗೂ ಗ್ರಾಮ ಪಂಚಾಯತಿಯ ಇತರ ಸದಸ್ಯರುಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸಾರ್ವಜನಿಕರು ಹಾಜರಿದ್ದರು.

ದೀವಗಿ ಗ್ರಾಮ ಪಂಚಾಯತ ಆವರಣದಲ್ಲಿ ಅದ್ಧೂರಿ ಧ್ವಜಾರೋಹಣ ಕಾರ್ಯಕ್ರಮ

ಕುಮಟಾ : ತಾಲೂಕಿನ ದೀವಗಿ ಗ್ರಾಮ ಪಂಚಾಯತದ ವತಿಯಿಂದ ಗ್ರಾ.ಪಂ. ಆವರಣದಲ್ಲಿ ನಡೆದ ಧ್ವಜಾರೋಹಣ ವನ್ನು ನೂತನ ಗ್ರಾ ಪಂ ಅಧ್ಯಕ್ಷ ಜಗದೀಶ ಎಸ್ ಭಟ್ ನೆರವೇರಿಸಿ ತಮ್ಮ ಈ ಅವಧಿಯಲ್ಲಿ ದೀವಗಿ ಗ್ರಾ ಪಂ ನ್ನು ತಾಲೂಕಿನಲ್ಲೇ ಮಾದರಿಯನ್ನಾಗಿ ಮಾಡುವ ಪ್ರಯತ್ನ ನಡೆಸಲಾಗುವುದೆಂದು ಎಂದರು.

  ನಂತರ ಮಾತನಾಡಿದ ದೀವಗಿಯ ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ಜೀವನದ ದಿನನಿತ್ಯದ ಅವಧಿಯಲ್ಲಿ ಸ್ವಲ್ಪ ಸಮಯವನ್ನಾದರೂ ದೇಶ ಸೇವೆಗಾಗಿ ನೀಡೋಣ ಆ ಮೂಲಕ ಅದು ನಮ್ಮ ಭವಿಷ್ಯದ ಮಕ್ಕಳ ಸೇವೆಯನ್ನೂ ಮಾಡಿದಂತಾಗುತ್ತದೆ. ಇದೇ ನಾವು ಭಾರತ ಮಾತೆಗೆ ಉಡುಗೊರೆಯಾಗಿ ನೀಡೋಣ ಎಂದು ಕರೆ ನೀಡಿದರು.

    ನಂತರ ಚೇತನಾ ಸೇವಾ ಸಂಸ್ಥೆಯ ವತಿಯಿಂದ ನೂತನ ಅಧ್ಯಕ್ಷ ಜಗದೀಶ ಎಸ್ ಭಟ್ ರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಪ್ರೋತ್ಸಾಹಿಸಿ ಅಭಿನಂದಿಸಲಾಯಿತು. ಈ ಸನ್ಮಾನವನ್ನು ದೀವಗಿ ಗ್ರಾಮ ಸೇವಾ ಸಂಘದ ಅಧ್ಯಕ್ಷ ಉತ್ತಮ ದೇಶಭಂಡಾರಿ ಮುಖಂಡರಾದ ಎಲ್.ಎಸ್ ಅಂಬಿಗ, ಮೈಕಲ್ ಜೆ ರೊಡ್ರಿಗೀಸ್ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ರಾಘವೇಂದ್ರ ಆರ್ ದೇಶಭಂಡಾರಿ ಸನ್ಮಾನ ಪತ್ರವನ್ನು ವಾಚಿಸಿ ಸನ್ಮಾನ ಪತ್ರ ಪ್ರಧಾನ ಮಾಡಿದರು. ಪಿಡಿಓ ರೇಖಾ ನಾಯಕ ಸ್ವಾಗತದೊಂದಿಗೆ ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದರು.

RELATED ARTICLES  ಭಟ್ಕಳದ ಈ ಹುಡುಗಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

  ಈ ಸಂದರ್ಭದಲ್ಲಿ ಗ್ರಾ ಪಂ ದ ಉಪಾಧ್ಯಕ್ಷರು, ಸದಸ್ಯರುಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು, ಸ ಹಿ ಪ್ರಾ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

ಹೊಲನಗದ್ದೆ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ‍್ಯ ದಿನಾಚರಣೆ

ಕುಮಟಾ : ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಂದ್ರಹಾಸ ನಾಯ್ಕರವರು ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಾತಂತ್ರ‍್ಯ ಅನ್ನುವುದು ಯಾರು ನಮಗೆ ಕೊಟ್ಟಿದ್ದಲ್ಲ ಸತತ ಹೋರಾಟದ ಫಲವಾಗಿ ಅದು ನಮಗೆ ದೊರಕಿದೆ. ಸಾವಿರಾರು ಸ್ವಾತಂತ್ರ‍್ಯ ಹೋರಾಟಗಾರರ ಬಲಿದಾನದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಉತ್ತಮ ನಾಗರಿಕರಾಗಿ ರೂಪುಗೊಳ್ಳುವ ಮೂಲಕ ರಾಷ್ಟ್ರಕ್ಕೆ ಒಂದು ಕೊಡುಗೆಯಾಗಿ ಎಂದು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

   ಹೊಲನಗದ್ದೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಎಂ.ಎA ಹೆಗಡೆ, ಉಪಾಧ್ಯಕ್ಷರಾದ ಮಹಾಂತೇಶ ಹರಿಕಂತ್ರ ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಆರ್.ಎಸ್ ಭಟ್ ಕೋಠಿ ಮಾತನಾಡಿ ಜಗತ್ತು ಭಾರತದ ಮಹತ್ವವನ್ನು ಇಂದು ಅರಿತಿದೆ,  ವಿಶ್ವ ನಮ್ಮೆಡೆಗೆ ನೋಡುತ್ತಿದೆ , ಭವಿಷ್ಯದಲ್ಲಿ ವಿಶ್ವಕ್ಕೆ ಗುರುವಾಗುವ ಎಲ್ಲಾ ಸಾಧ್ಯತೆಗಳು ಭಾರತಕ್ಕಿದೆ ಈ ಸಂದರ್ಭದಲ್ಲಿ ನಾವು ಕೇವಲ ನಮ್ಮ ಹಕ್ಕಿಗಾಗಿ ಹೋರಾಡದೆ ನಮ್ಮ ಕರ್ತವ್ಯವನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದರು.

   ಗ್ರಾಮ ಪಂಚಾಯತ್ ಹೊಲನಗದ್ದೆಯ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ಊರ ನಾಗರಿಕರು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು ಶಿಕ್ಷಕ ರವೀಂದ್ರ ಭಟ್ ಸೂರಿ ಸ್ವಾಗತಿಸಿ ನಿರೂಪಿಸಿದರು. ಮುಖ್ಯಾಧ್ಯಾಪಕಿ ಶ್ರೀಮತಿ ಜಯಶ್ರೀ ಪಟಗಾರ ವಂದಿಸಿದರು. ನಂತರದಲ್ಲಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಹಾಗೂ ಶಿಕ್ಷಕರು ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗಿ ಜನರಲ್ಲಿ ಸ್ವಾತಂತ್ರ‍್ಯ ಜಾಗೃತಿ ಮೂಡಿಸಿದರು.

ನಾದಶ್ರೀಯಲ್ಲಿ ರೋಟರಿಯಿಂದ ಧ್ವಜಾರೋಹಣ

ಕುಮಟಾ: ಇಲ್ಲಿಯ ರೋಟರಿಯ ನಾದಶ್ರೀ ಕಲಾಕೇಂದ್ರದ ಹೊರಾಂಗಣದಲ್ಲಿ ರೋಟರಿ ಕ್ಲಬ್ ವತಿಯಿಂದ ೭೭ನೆಯ ಸ್ವಾತಂತ್ರೊö್ಯÃತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣಗೈದು ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಎನ್. ಆರ್. ಗಜು ‘ನಾವು ಸಹಾನುಭೂತಿ ಮತ್ತು ಸಹಾನುಭೂತಿಯ ಮನೋಭಾವವನ್ನು ಬೆಳೆಸಿಕೊಳ್ಳೋಣ. ಅಗತ್ಯವಿರುವವರಿಗೆ ಬೆಂಬಲ ನೀಡೋಣ ಮತ್ತು ಯಾರೂ ಹಿಂದುಳಿದಿಲ್ಲವೆAದು ಖಚಿತಪಡಿಸಿಕೊಳ್ಳುವತ್ತ ದೃಢ ಮನಸ್ಸನ್ನಿಡೋಣ. ನಮ್ಮ ಭಾರತವು ತಂತ್ರಜ್ಞಾನ, ನಾವಿನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ರೋಟರಿಯ ಏಳು ಸೇವಾಕ್ಷೇತ್ರಗಳಾದ ಶಾಂತಿ ನಿರ್ಮಾಣ, ಸಂಘರ್ಷ ತಡೆಗಟ್ಟುವಿಕೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ನೀರು, ನೈರ್ಮಲ್ಯ, ತಾಯಿ ಮತ್ತು ಮಗುವಿನ ಆರೋಗ್ಯ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಮುದಾಯದ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಪಾತ್ರವೂ ಇದೆ’  ಎಂದು ಹೆಮ್ಮೆಯಿಂದ ನುಡಿದರು. 

  ‘ವೈವಿಧ್ಯತೆಯಲ್ಲಿ ಏಕತೆ ಎಂಬುದು ನಮ್ಮಲ್ಲಿಯ ವಿಶೇಷತೆಯಾಗಿದೆ. ಎಲ್ಲರೂ ಒಟ್ಟಿಗಿರಬೇಕು. ಜಗತ್ತಿಗೆ ಹೊಸ ಭರವಸೆಯನ್ನು ಬಿತ್ತುತ್ತಲೇ ರಾಷ್ಟç ನಿರ್ಮಾಣಕ್ಕೆ ಕೈಜೋಡಿಸೋಣ’ ಎಂದು ರೋಟರಿಯ ಸಹಾಯಕ ಪ್ರಾಂತಪಾಲ ವಸಂತ ರಾವ್ ಅಭಿಪ್ರಾಯ ಹಂಚಿಕೊAಡರು.  ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ಗೌರವದ ರಕ್ಷೆ ನೀಡಿ, ಧ್ವಜ ಗೀತೆ ನಿರೂಪಿಸಿದರು. ಈ ಸಂದರ್ಭದಲ್ಲಿ ಕೋಶಾಧ್ಯಕ್ಷ ಸಂದೀಪ ನಾಯಕ ರೊಟೇರಿಯನ್ನರಾದ ಡಾ.ಡಿ.ಡಿ.ನಾಯಕ, ಎಂ.ಬಿ.ಪೈ, ಡಾ.ಸಚಿನ್ ನಾಯಕ, ಎಸ್.ವಿ.ಹೆಗಡೆ ನಂದೈಯನ್, ಸತೀಶ ನಾಯ್ಕ, ಸುರೇಶ ಭಟ್, ಡಾ.ನಮೃತಾ ಶಾನಭಾಗ, ಮೌಸ್ಹಿನ್ ಖಾಜಿ, ಚೇತನ ಶೇಟ್, ಅತುಲ್ ಕಾಮತ, ಕಿರಣ ನಾಯಕ, ಶಿಲ್ಪಾ ಜಿನರಾಜ್, ಜಿನರಾಜ್ ಜೈನ್, ಸುಜಾತಾ ಕಾಮತ, ಡಾ.ವಾಗೀಶ್ ಭಟ್, ಡಾ.ಶ್ರೀದೇವಿ ಭಟ್, ಯೋಗೇಶ್ ಕೋಡ್ಕಣಿ, ಡಾ.ನಿತಿಶ್ ಶಾನಭಾಗ, ವಸಂತ ಶಾನಭಾಗ, ಸಿಎ ವಿನಾಯಕ ಹೆಗಡೆ, ನಿಖಿಲ್ ಕ್ಷೇತ್ರಪಾಲ, ಪ್ರಣವ್ ಮಣಕೀಕರ, ಅನೆಟ್ ಗಣೇಶ ನಾಯ್ಕ, ಅನೆಟ್ ಧ್ಯಾನ, ಅನೆಟ್ ರೀಷಾ, ಶೇಖರ ಕುಮಟಾಕರ ಮೊದಲಾದವರು ಉಪಸ್ಥಿತರಿದ್ದರು. 

ಕೊಂಕಣದಲ್ಲಿ ಸಂಭ್ರಮದ ಸ್ವಾತಂತ್ರೊö್ಯÃತ್ಸವ

ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಅಂಗಸAಸ್ಥೆಗಳಾದ ಆರ್‌ಡಿಎಸ್‌ಎಚ್ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ, ಸಿವಿಎಸ್‌ಕೆ ಪ್ರೌಢಶಾಲೆ, ಸರಸ್ವತಿ ಪ.ಪೂ. ಕಾಲೇಜ್, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರ, ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ಇವುಗಳ ಸಹಯೋಗದಲ್ಲಿ ೭೭ನೇ ಸ್ವಾತಂತ್ರೊö್ಯÃತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ವಿಠ್ಠಲ ಆರ್. ನಾಯಕ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಗೈದರು.

   ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಸ್ವಾತಂತ್ರೊö್ಯÃತ್ಸವದ ಸಂದೇಶ ನೀಡುತ್ತ, ನಮ್ಮ ಪೂರ್ವಜರ ತ್ಯಾಗ, ಬಲಿದಾನ ಸ್ಮರಿಸಿ, ಸ್ವಾತಂತ್ರö್ಯದ ಅರ್ಥವನ್ನು ಸಾರ್ಥಕ ಮಾಡಬೇಕು. ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿರುವದೇಶ, ವಿಶ್ವಗುರು ಆಗಬೇಕು. ವಿವಿಧ ಕ್ಷೇತ್ರಗಳ ನಮ್ಮ ಪ್ರಗತಿಕಂಡು ಈಗಾಗಲೇ ಜಗತ್ತು ನಿಬ್ಬೆರಗಾಗಿದೆ. ಸಿಗದ ಮಾನ ಮನ್ನಣೆ ನಮಗೆ ಸಿಗಲಾರಂಭಿಸಿದೆ. ಇದನ್ನು ಉಳಿಸಿ ಬೆಳಸುವತ್ತ ನಮ್ಮ ನಿಮ್ಮೆಲ್ಲರ ಪ್ರಯತ್ನ ನಿರಂತರವಾಗಿರಲಿ. ಅದಕ್ಕೆ ಪ್ರತಿಯೊಬ್ಬರೂ ರಾಷ್ಟçಪ್ರಜ್ಞೆ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

    ಸ್ವಾತಂತ್ರö್ಯ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸರಸ್ವತಿ ವಿದ್ಯಾಕೇಂದ್ರ ಹಾಗೂ ಬಾಲಮಂದಿರದ ಪುಟಾಣಿಗಳು ಹೋರಾಟಗಾರರ ವೇಷ-ಭೂಷಣ ತೊಟ್ಟು ಧ್ವಜಾರೋಹಣ ಸಂದರ್ಭದಲ್ಲಿ ಹಾಜರಿದ್ದು ಸ್ವಾತಂತ್ರö್ಯಕ್ಕಾಗಿ ಪ್ರಾಣತೆತ್ತ ಮಹನೀಯರುಗಳನ್ನು ಸ್ಮರಿಸುವಂತೆ ಮಾಡಿದರು.

ಸಂಸ್ಥೆಯ ವಿಶ್ವಸ್ಥರಾದ ದಾಮೋದರ ಶಾನಭಾಗ, ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ರಾಮಕೃಷ್ಣ ಗೋಳಿ, ಅನಂತ ಶಾನಭಾಗ, ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ನಿವೃತ್ತ ಪ್ರಾಧ್ಯಾಪಕರಾದ ಎಂ.ಎA.ಹೆಗಡೆ, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಚಾಲಕ-ನಿರ್ವಾಕರು, ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES  ಹಿರಿಯ ವೈದಿಕರಾದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಇನ್ನಿಲ್ಲ.

   ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿದರು, ಗೌರೀಶ ಭಂಡಾರಿ ನಿರ್ವಹಿಸಿ ವಂದಿಸಿದರು. ವಿದ್ಯಾರ್ಥಿಗಳ ರಾಷ್ಟçಗೀತೆ, ರೈತಗೀತೆ, ವಂದೇ ಮಾತರಂ ಗಮನ ಸೆಳೆಯಿತು.  ಮನರಂಜನಾ ಕರ‍್ಯಕ್ರಮಗಳು ನೆರೆದವರನ್ನು ರಂಜಿಸಿದವು.

ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೊö್ಯÃತ್ಸವ.

ಕುಮಟಾ : ಇಲ್ಲಿನ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದಿAದ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಜಿ.ಹೆಗಡೆಯವರು ಧ್ವಜಾರೋಹಣ ನಡೆಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪಿ. ಡಬ್ಲೂöಡಿ ಇಂಜಿನಿಯರ್ ಸೋಮನಾಥ ಭಂಡಾರಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಜೀವನದಲ್ಲಿ ನೀವು ಯಾವುದೇ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ನಂತರವೂ ದೇಶಾಭಿಮಾನವನ್ನು ಉಳಿಸಿಕೊಂಡು ಇಂತಹ ರಾಷ್ಟಿçÃಯ ಹಬ್ಬಗಳ ಆಚರಣೆಗಳಲ್ಲಿ ಪಾಲ್ಗೊಳ್ಳಿರಿ ಎಂದರು. ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆಯವರು ಭಾರತ ಮೂರನೇ ಬಲಿಷ್ಠ ರಾಷ್ಟçವಾಗಿ ನಿರ್ಮಾಣವಾಗುವಲ್ಲಿ ನೀವೇನು ಕೊಡುಗೆಗಳನ್ನು ಕೊಡಬಲ್ಲಿರಿ ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಪ್ರಯತ್ನ ಸಾಗಲಿ ಎನ್ನುತ್ತಾ ಘೋಷಣಾವಾಕ್ಯಗಳನ್ನು ಘೋಷಿಸುತ್ತಾ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಜೊತೆಗೆ ಸಂಸ್ಥೆಯ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಹಾಜರಿದ್ದು ಸಹಕರಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಸಿಹಿಯನ್ನು ಹಂಚಲಾಯಿತು.

    ಸಭಾ ಕಾರ್ಯಕ್ರಮ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಿ.ಎನ್.ಭಟ್ ರವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರನ್ನು ಕಾಲೇಜಿನ ಪರವಾಗಿ  ಪುಷ್ಪಗಳನ್ನು ನೀಡಿ ಸ್ವಾಗತಿಸಿದರು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆಗಳು, ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮೇಧಿನಿ ದಿನ ವಿಶೇಷದ ಕುರಿತಾದ ಮಾತುಗಳು ಗಮನ ಸೆಳೆದವು.

ಉಂಚಗಿ ಶಾಲೆಯಲ್ಲಿ ಸ್ವಾತಂತ್ರೋತ್ಸವ

ಕುಮಟಾ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಂಚಗಿಯಲ್ಲಿ ೭೬ನೇ ಸ್ವಾತಂತ್ರೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಿ, ಊರಿನಲ್ಲಿ ಮಕ್ಕಳಿಂದ ಜಾಥಾ ನಡೆಸಲಾಯಿತು. ನಂತರ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಉಂಚಗಿಯಲ್ಲಿ ಧ್ವಜಾರೋಹಣದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಧ್ಯಾಪಕಿ ವೀಣಾ ನಾಯ್ಕ, ಸಹ ಶಿಕ್ಷಕಿ ರಮಾ ದೇಶಭಂಡಾರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಾನಂದ ಗೌಡ, ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಶ್ರೀಕಾಂತ್ ಶಾಸ್ತ್ರೀ ಹಾಗೂ ಶಶಾಂಕ ಶಾಸ್ತ್ರೀ, ಗಜಾನನ ಗೌಡ, ಗಣೇಶ ಗೌಡ, ವಿಷ್ಣು ಗೌಡ ಸೇರಿದಂತೆ ಊರ ನಾಗರಿಕರು ಹಾಜರಿದ್ದರು..

ಕುಮಟಾ : ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮಿರ್ಜಾನ್‌ನಲ್ಲಿ ಸ್ವಾತಂತ್ರ‍್ಯೋತ್ಸವವನ್ನು ಅತ್ಯಂತ ವಿಜ್ರಂಭಣೆಯಿAದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ , ಮಾಜಿ ಯೋಧರಾದ ಮಿಥುನ್ ಬಾಂದೇಕರ್ ಧ್ವಜಾರೋಹಣ ನೇರವೇರಿಸಿ ತಾವು ಭಾರತೀಯ ಸೈನ್ಯ ಸೇರಿದ ಬಗ್ಗೆ ಮತ್ತು ದೇಶಪ್ರೇಮ,  ಶಿಸ್ತಿನ ಬಗ್ಗೆ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

   ಆಡಳಿತ ಮಂಡಳಿ ಸದಸ್ಯರಾದ ಎಂ. ಟಿ. ಗೌಡರವರು ನಾವು ಸ್ವಾತಂತ್ರ‍್ಯವನ್ನು ಹೇಗೆ ಕಳೆದುಕೊಂಡಿದ್ದೆವು ಮತ್ತು ಹೇಗೆ ಅದನ್ನು ಪಡೆದೆವು? ನಮ್ಮ ಭವ್ಯ ಭಾರತದ ಸಂಸ್ಕೃತಿ, ಪರಂಪರೆ, ಸನಾತನ ಧರ್ಮ, ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ವಿವಿಧ ದೃಷ್ಟಾಂತಗಳ ಮೂಲಕ ಎಳೆಎಳೆಯಾಗಿ ವಿವರಿಸಿದರು.

   ಬಿಜಿಎಸ್ ಸೆಂಟ್ರಲ್ ಸ್ಕೂಲಿನ ನಿವೃತ್ತ ಪ್ರಾಂಶುಪಾಲ ಎಸ್. ಎನ್. ಭಟ್ ಮಾತನಾಡಿ ನಮ್ಮ ದೇಶ ಇಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ವಿದ್ಯಾರ್ಥಿಗಳಾದ ತಾವು ಚೆನ್ನಾಗಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ, ನೀವು ಕಲಿತ ಶಾಲೆಗೆ ಕೀರ್ತಿ ತನ್ನಿ ಎಂದು ಸ್ವಾತಂತ್ರ‍್ಯೋತ್ಸವಕ್ಕೆ ಶುಭ ಹಾರೈಸಿದರು.

   ಆಡಳಿತಾಧಿಕಾರಿ ಜಿ. ಮಂಜುನಾಥರವರು ನಮ್ಮ ದೇಶದ ಸ್ವಾತಂತ್ರ‍್ಯಕ್ಕೆ ಹೋರಾಡಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ವೀರ ಧೀರರ ಜೀವನ ಚರಿತ್ರೆಯ ಬಗ್ಗೆ ಚೈತನ್ಯದಾಯಕ ಮಾತನಾಡಿದರು. ಪ್ರಾಂಶುಪಾಲೆ ಲೀನಾ ಎಂ. ಗೊನೇಹಳ್ಳಿಯವರು ನಮಗೆ ನೀಡಿದ ಸ್ವಾತಂತ್ರ‍್ಯವನ್ನು ದುರುಪಯೋಗಪಡಿಸಿಕೊಳ್ಳದೆ, ಸದುಪಯೋಗಪಡಿಸಿಕೊಂಡು ಇಂದಿನ ವಿದ್ಯಾರ್ಥಿಗಳೇ ಮುಂದಿನ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು. 

   ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ವಿದ್ಯಾರ್ಥಿಗಳ ೪ ತಂಡಗಳಾದ ಯುನಿಟಿ, ಪೀಸ್, ಕರೇಜ್ ಮತ್ತು ಸ್ಟ್ರೆಂಗ್ಥ್ ನಡುವೆ ಪಥಸಂಚಲನದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಆಕರ್ಷಕ ಪಥಸಂಚಲನದ ಸ್ಪರ್ಧೆಯಲ್ಲಿ ಪೀಸ್ ತಂಡ ಪ್ರಥಮ ಮತ್ತು ಯುನಿಟಿ ತಂಡ ದ್ವಿತೀಯ, ಕರೇಜ್ ತಂಡ ತೃತೀಯ ಮತ್ತು ಸ್ಟ್ರೆಂಗ್ಥ್ ತಂಡ ಚತುರ್ಥ ಸ್ಥಾನ ಗಳಿಸಿದವು. ನಕುಲ್ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಸಮೃದ್ಧಿ, ಪೃಥ್ವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಭೀಜ್ಞಾ ಸ್ವಾಗತಿಸಿದಳು. ಸಂಜನಾ  ಮತ್ತು ಸಂಗಡಿಗರು ವಂದೇಮಾತರA, ಧ್ವಜಗೀತೆ ಮತ್ತು ರೈತಗೀತೆ ಹಾಡಿದರು. ಅದ್ವಿತ್ ಎಂ. ಕೆ, ಕುಮಾರ ಆರವ್, ಅಭಿಮಾನ್, ಕುಮಾರ್ ಚಿರಾಗ್, ಕುಮಾರಿ ಸೃಷ್ಟಿ, ಕುಮಾರಿ ನಿಸರ್ಗ ಭಾಷಣ ಮಾಡಿದರು. ಹನಿ ಮತ್ತು ಸಂಗಡಿಗರು ದೇಶಭಕ್ತಿಗೀತೆ ಹಾಡಿದರು. ದಿಶಾ ಮತ್ತು ದಿಯಾ  ಕಾರ್ಯಕ್ರಮ ನಿರೂಪಿಸಿದರು. ಮಾನಸಿ ವಂದಿಸಿದಳು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಮತ್ತು ನೃತ್ಯ ಜನಮನಸೂರೆಗೊಂಡಿತು. ವಿವಿಧ ವೇಷಭೂಷಗಳನ್ನು ತೊಟ್ಟ ಮುದ್ದು ಪುಟಾಣಿಗಳು ಎಲ್ಲರ ಕಣ್ಮನ ಸೆಳೆದರು. ದೈಹಿಕ ಶಿಕ್ಷಣ  ಶಿಕ್ಷಕರಾದ ಬಾಲಕೃಷ್ಣ ನಾಯಕ, ವೈಭವ ಗಾಂವಕರ, ನಾಗರತ್ನ ನಾಯ್ಕ ಮತ್ತು ಎಲ್ಲಾ ತಂಡಗಳ ಶಿಕ್ಷಕರು ಪಥಸಂಚಲನಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.