ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಡೆಂಗ್ಯೂ, ನ್ಯೂಮೋನಿಯಾ ಸೋಂಕುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗವೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮಕ್ಕಳು ಹೊರಗೆ ಬರುತ್ತಿರಲಿಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು, ಹಿಗಾಗಿಯೇ ಮಕ್ಕಳಲ್ಲಿ ಡೆಂಗ್ಯೂ, ನ್ಯುಮೋನಿಯಾ ಸೇರಿದಂತೆ ಇತರೆ ಸೋಂಕುಗಳು ತಗುಲುವುದು ಹೆಚ್ಚಾಗುತ್ತಿದೆ ಎಂದು ಶಿಶು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಸಲಹೆಗಾರ (ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ) ಡಾ ರಜತ್ ಆತ್ರೇಯ ಅವರು ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗವು ಮಕ್ಕಳು ಹೊರಗೆ ಬಾರದಂತೆ, ಸೋಂಕುಗಳಿಗೆ ಒಡ್ಡಿಕೊಳ್ಳದಂತೆ ಮಾಡಿತ್ತು. ಇದರಿಂದಾಗಿ ಮಕ್ಕಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿಲ್ಲ. 2-3 ವಾರಗಳಿಗೊಮ್ಮೆ ಶುರುವಾಗುವ ವೈರಸ್ ಗಳು ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

RELATED ARTICLES  ನಿಂತು ಯಾಕೆ ನೀರು ಕುಡಿಯಬಾರದು ಗೊತ್ತಾ ? ಇಲ್ಲಿದೆ ಓದಿ

ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ಮಕ್ಕಳು ಬರುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಪ್ರತಿದಿನ ಸರಾಸರಿ ಹತ್ತು ಮಕ್ಕಳು ಡೆಂಗ್ಯೂನಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಈ ಪೈಕಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರ ಜೊತೆಗೆ ಪ್ರತಿದಿನ ಐದರಿಂದ ಹತ್ತು ನ್ಯುಮೋನಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಂದು ಅಥವಾ ಎರಡು ಪ್ರಕರಣಗಳಿಗೆ ದಾಖಲಾತಿ ಅಗತ್ಯವಾಗುತ್ತಿದೆ.

RELATED ARTICLES  ಕ್ಯಾನ್ಸರ್ ನಿಂದ ದೂರ ಇರಬೇಕೆ ? ಇದನ್ನು ನಿಮ್ಮ ಜೀವನದಲ್ಲಿ ಪಾಲಿಸಿ.

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಅಡೆನೊವೈರಸ್ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಕೋವಿಡ್ ಗೂ ಮೊದಲು ಮಕ್ಕಳಲ್ಲಿ ಸೋಂಕಿನ ತೀವ್ರತೆ ತುಂಬಾ ಸೌಮ್ಯವಾಗಿರುತ್ತಿದ್ದವು. ಆದರೀಗ, ಅತೀವ್ರ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆಗಳ ತೀವ್ರ ರೋಗಲಕ್ಷಣಗಳು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.