ಭಟ್ಕಳ : ಅಕ್ಕ, ತನ್ನ ತಂಗಿಗೆ ಚಾಕಲೇಟ್ ಎಂದು ಹೇಳಿಕೊಂಡು ಜೀನ್ಸ್ ಪ್ಯಾಂಟ್ ಬಟನ್ ಕೊಟ್ಟಿದ್ದು, ಇದನ್ನು ಹಸುಗೂಸು ನುಂಗಿದ ಘಟನೆ ಭಟ್ಕಳದಲ್ಲಿ‌ ನಡೆದಿದೆ. ಅಕ್ಕ ತನಗೆ ಅರಿವಿಲ್ಲದೆ ಚಾಕಲೇಟ್ ಎಂದು ತಂಗಿಗೆ ಪ್ಯಾಂಟ್ ಬಟನ್ ಕೊಟ್ಟಿದ್ದು, ಇದನ್ನು ಎರಡು ತಿಂಗಳ ಹಸುಳೆ ನುಂಗಿದ ಪರಿಣಾಮ ಎರಡು ತಿಂಗಳ ಮಗು ಉಸಿರಾಟ ನಡೆಸಲಾಗದೇ ಹೊರಳಾಡಿದೆ. ಇದನ್ನು ಗಮನಿಸಿದ ಪೋಷಕರು, ಭಟ್ಕಳ ಸರಕಾರಿ ಆಸ್ಪತ್ರೆಗೆ ಮಗುವನ್ನು ಕರೆಯೊಯ್ದಿದ್ದಾರೆ.

RELATED ARTICLES  ಪುನೀತನ ಜೊತೆ ಕುಳಿತ ಗಣಪ : ವಿಭಿನ್ನ ಕಲ್ಪನೆಗೆ ಜನ ಮೆಚ್ಚುಗೆ

ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ ಅಮೃತ  ಸಂಕಷ್ಟಕ್ಕೊಳಗಾದ ಹಸುಳೆ. ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರ ತೆಗೆದಿದ್ದು, ಹಸುಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ವೈದ್ಯರ ಯಶಸ್ವಿ ಚಿಕಿತ್ಸೆಯಿಂದಾಗಿ ಹಸುಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

RELATED ARTICLES  ಬುಡ ಸಮೇತ ಕಿತ್ತುಬಿದ್ದ ಮರ : ಮನೆ‌ ಜಖಂ