ಮುಂಡಗೋಡ : ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಇಳಿದ ಇಬ್ಬರು ಆರೋಪಗಳನ್ನು ಮಾಲು ಸಮೇತ ಪೊಲೀಸ್‌ರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮುಂದಾದ ಪಟ್ಟಣದ ನೆಹರು ನಗರದ ಸಂದೇಶ ಸಂಗಪ್ಪ ಕೊಕರೆ, ತಾಲೂಕಿನ ಮಜ್ಜಿಗೇರಿ ಗ್ರಾಮದ ರಿಯಾಜ್ ಅಹ್ಮದ ಹಜರೇಸಾಬ ಮುಗಳಿಕಟ್ಟಿ ಎಂಬುವರು
ಆರೋಪಿಗಳಾಗಿದ್ದಾರೆ.

RELATED ARTICLES  ಗೋಸ್ವರ್ಗದಲ್ಲಿ ಲೋಕಾರ್ಪಣೆಗೊಂಡ 'ಕುಮಾರವ್ಯಾಸಭಾರತ ಕಥಾಮೃತ' ಕೃತಿ - ಓದುಗ ವೃಂದಕ್ಕೆ ಶ್ರೀಭಾರತೀ ಪ್ರಕಾಶನದ ಕೊಡುಗೆ

ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.1 ಸಮೀಪ ಯಲ್ಲಾಪುರ ರಸ್ತೆಯಲ್ಲಿ ಸ್ಕೂಟಿ ಮೇಲೆ ಅಂದಾಜು ಹತ್ತು ಸಾವಿರ ರೂ ಬೆಲೆ ಬಾಳುವ 948 ಗ್ರಾಂ. ತೂಕದ ಗಾಂಜಾ, ಮತ್ತು 550 ರೂ ಮಾಲು ಸಮೇತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

RELATED ARTICLES  ಮನೆ ಮನೆಗೂ ಮಾಧವ ನೃತ್ಯ ಪಯಣ ಮಾರ್ಚ 23 ಕ್ಕೆ‌ಪ್ರಾರಂಭ


ಸಿಪಿಐ ಬರಮಪ್ಪ ಲೋಕಾಪುರ ನೇತ್ರತ್ವದಲ್ಲಿ ಪಿಎಸ್‌ಐ ಯಲ್ಲಾಲಿಂಗ ಕುನ್ನೂರ, ಕ್ರೈಂ ಪಿಎಸ್‌ಐ ಹನ್ಮಂತಪ್ಪ ಕುಡಗುಂಟಿ, ಸಿಬ್ಬಂದಿಗಳಾದ ಅಣ್ಣಪ್ಪ ಬುಡಿಗೇರ, ಕೋಟೆಶ ನಾಗರವಳ್ಳಿ, ಅನ್ವರ್ ಖಾನ್, ಸಲೀಂ ಕೊಲ್ಲಾಪುರ, ಬಸವರಾಜ ಲಮಾಣಿ ಹಾಗೂ ತಿರುಪತಿ ಈ ದಾಳಿಯಲ್ಲಿ
ಭಾಗಿಯಾಗಿದ್ದರು.