ಕುಮಟಾ : ಪಟ್ಟಣದ ಹೆಗಡೆ ಕ್ರಾಸ್ ಸಮೀಪದಲ್ಲಿರುವ ನಾದಶೀ ಕಲಾಕೇಂದ್ರದಲ್ಲಿ ಆ.೨೦ ರ ರವಿವಾರ ಸಂಜೆ ೪ ಘಂಟೆಯಿಂದ ಕೊಂಕಣಿ ಮಾನ್ಯತಾ ದಿನವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣಿ ಪರಿಷತ್ತಿನ ಸಂಚಾಲಕ ಆನಂದ ನಾಯ್ಕ ತಿಳಿಸಿದರು ಅವರು ಕಾರ್ಯಕ್ರಮದ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶದ ಸಂವಿಧಾನದ 8ನೇ ಪರಿಚ್ವೆದದಲ್ಲಿ 1992 ರ ಆ.೨೦ ರಂದು ಕೊಂಕಣಿಯನ್ನು ಸಹ ಒಂದು ಸ್ವತಂತ್ರ ಭಾಷೆಯನ್ನಾಗಿ ಮಾನ್ಯತೆ ಮಾಡಲಾಯಿತು. ಹೀಗಾಗಿ ಈ ದಿನವನ್ನು ಕೊಂಕಣಿಯ ಅಭಿಮಾನಿಗಳು ಒಂದು ಸಂಭ್ರಮದ ದಿನವನ್ನಾಗಿ ಪ್ರತಿ ವರ್ಷ ಆಚರಿಸುತ್ತಿದ್ದಾರೆ. ಅಂತೆಯೇ ಈ ಸಲವೂ ಸಹ ಕುಮಟಾ ಕೊಂಕಣಿ ಪರಿಷತ್ತಿನ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

RELATED ARTICLES  ದ್ವಿತೀಯ ಪಿ.ಯು ಪರೀಕ್ಷೆ ಬರೆಯುವವರಿಗೆ ಗುಡ್ ನ್ಯೂಸ್

ಇದರ ಉದ್ಘಾಟನೆಯನ್ನು  ಟಾಟಾ ಪ್ರಾಜೆಕ್ಟ್ ಮುಂಬೈನ ಸಿಇಓ ವಿನಾಯಕ ರತ್ನಾಕರ ಪೈ ನೆರವೇರಿಸಲಿದ್ದಾರೆ .ಇತ್ತೀಚಿಗೆ ಹೊಸದಾಗಿ ನಿರ್ಮಿಸಲ್ಪಟ್ಟ ಪಾರ್ಲಿಮೆಂಟ್ ಭವನದ ರಚನೆಯಲ್ಲಿ ಬಹುಪಾಲು ಕೊಡುಗೆ ಇವರ ಮುಖಂಡತ್ವದಲ್ಲಿ ಜರುಗಿರುವುದು ಹೆಮ್ಮೆ ಎಂದು ಇದೇ ವೇಳೆ ಅವರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಸೆಂಟ್ ಮಿಲಾಗ್ರೀಸ್ ಬ್ಯಾಂಕ್ ನ ಸಿಇಓ ಜಾರ್ಜ್ ಫರ್ನಾಂಡಿಸ್ ಹಾಗೂ ನಮ್ಮ ತಾಲೂಕಿನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಇರಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವನಿತಾ ಶರೀಷ್ ನಾಯಕ ಇವರು ಬರೆದ “ಸಂಸ್ಕಾರ ಕಾಣಿ “ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದರು.

RELATED ARTICLES  ‘ಕುಂಬಾರ ಹಳ್ಳಿ’ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಹ ಸ್ವಯಂ ಸೇವಾ ಸಂಸ್ಥೆ(ಎನ್‍ಜಿಓ)ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದೇ ದಿನ ಸಂಜೆ ಭಜನ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಪುರಸ್ಕಾರ ಪ್ರಧಾನ ಮಾಡಲಾಗುವುದು. ಕೊನೆಯಲ್ಲಿ ವಿದುಷಿ ನಯನಾ ಪ್ರಸನ್ನ ಇವರ ಮಾರ್ಗದರ್ಶನದಲ್ಲಿ ನಾದಶ್ರೀ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಬೇರೆಬೇರೆ ಸಮಾಜದ ಹಾಗೂ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವೂ ಇದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಟಾದ ಕೊಂಕಣಿ ಪರಿಷತ್ತಿನ ಅಧ್ಯಕ್ಷ ಅರುಣ ಎಸ್ ಉಭಯಕರ ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅರುಣ ಉಭಯಕರ್, ಎಂ.ಬಿ ಪೈ, ಎಂ.ಕೆ ಶಾನಭಾಗ ಇದ್ದರು.