ಶಿರಸಿ: ವಿಕೇಂದ್ರೀಕರಣ ಆಡಳಿತ ವ್ಯವಸ್ಥೆಯಲ್ಲಿ ಸದೃಢವಾಗಿರಬೇಕಿದ್ದ ತಾಲೂಕು ಪಂಚಾಯಿತಿಗೆ ಅನುದಾನ ಕೊರತೆ ಆಗುತ್ತಲೇ ಇದೆ. ಕೊನೇ ಪಕ್ಷ ಕಟ್ಟಡವಾದರೂ ಸರಿ ಇರಬೇಕು. ಆದರೆ ಅದೂ ಸಣಕಲಾಗಿದ್ದು, ಶಿಥಿಲಾವಸ್ಥೆಯಲಿದೆ. ಇರುವ ಕಟ್ಟಡ ಪದೇ ಪದೇ ರಿಪೇರಿಗೆ ಬರುತ್ತಿದೆ.

ತಾಲೂಕು ಪಂಚಾಯಿತಿ ಕಟ್ಟಡಕ್ಕೆ ಐದು ದಶಕಗಳ ಇತಿಹಾಸ ಇದೆ. ಮಳೆಗಾಲದಲ್ಲಿ ಎಲ್ಲಿ ನೋಡಿದರಲ್ಲಿ ಸೋರುತ್ತಿದೆ. ಆಗಲೋ ಈಗಲೋ ಬೀಳುವ ಆತಂಕ ಕೂಡ ಇದೆ. ಹೆಂಚು ಮಾಡಿನ ಛಾವಣಿಯಂತೂ ದಿನಗಣನೆ ಎಣಿಸುತ್ತಿದೆ. ಇಲ್ಲಿಯ ತಾಲೂಕು ಪಂಚಾಯಿತಿ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತವೆ.

RELATED ARTICLES  ಎಂ. ನಾರಾಯಣ ಭಟ್ಟರ ಎಂಬತ್ತರ ಅಭಿನಂದನಾ ಹೊತ್ತಿಗೆ 'ಕಲಾನಿಧಿ' ಬಿಡುಗಡೆ

ತಾಲೂಕಿನ ಪಶ್ಚಿಮ ಭಾಗ ಶಿರಸಿ-ಸಿದ್ದಾಪುರ ಕ್ಷೇತ್ರದ  ವ್ಯಾಪ್ತಿಗೆ ಒಳಪಟ್ಟರೆ, ಪೂರ್ವ ಭಾಗದ ಗ್ರಾಪಂಗಳನ್ನು ಯಲ್ಲಾಪುರ ಕ್ಷೇತ್ರ ಒಳಗೊಂಡಿದೆ. 32 ಗ್ರಾಪಂಗಳ ವ್ಯಾಪ್ತಿಯನ್ನು ಹೊಂದಿರುವ ತಾಲೂಕಿನ ಪ್ರಗತಿ ಪರಿಶೀಲನೆಯನ್ನು  ಎರಡು ಕ್ಷೇತ್ರಗಳ ಶಾಸಕರೂ ನಡೆಸುತ್ತಾರೆ.

ಆದರೆ ಕಟ್ಟಡ ಮಾತ್ರ ಹೆಂಚಿನ ಮಾಡಿನದ್ದಾಗಿದ್ದು, ರೀಪು, ಪಕಾಸುಗಳಿಗೆ ಗೆದ್ದಲು ಹಿಡಿದು ಹೋಗಿದೆ. ವರ್ಷವೂ ತುಂಡಾದ ರೀಪುಗಳನ್ನು ಜೋಡಿಸಿ ರಿಪೇರಿ ಮಾಡುವುದೇ ಒಂದು ಕೆಲಸವಾಗಿದೆ. ಹಿಂದೆ ಮಾಡಿದ ಟಾರ್‌ ಶೀಟ್‌ ಹೊದಿಕೆ ಕೂಡ ಅಪ್ರಯೋಜಕವಾಗಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಸದಾನಂದ ಭಟ್ಟ ಅವರ ಅವಧಿಯಲ್ಲೇ ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸರಕಾರದ ಮುಂದೆ ಇತ್ತು.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆಯಲ್ಲಿ ಸಾಧನೆ.

ಈ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳಿಗೂ ಪ್ರಸ್ತಾವನೆ ಕಳಿಸಲಾಗಿದೆ. ಮೂರು ಕೋಟಿ ರೂ. ಮೊತ್ತದ ನೂತನ ಕಟ್ಟಡಕ್ಕೆ ಬೇಡಿಕೆ ಇದೆ. ಇದು ಯಾವಾಗ ಈಡೇರುತ್ತದೆಯೋ, ತಾಪಂಗೆ ಯಾವಾಗ ಹೊಸ ಕಟ್ಟಡ ಭಾಗ್ಯ ಸಿಗುವುದೋ ಎಂಬುವುದನ್ನು ಕಾದು ನೋಡಬೇಕಿದೆ.