ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ ಸರಸ್ವತಿ ಪದವಿಪೂರ್ವ ಕಾಲೇಜಿನ ೭ ವಿದ್ಯಾರ್ಥಿಗಳು ೨೦೨೨-೨೩ ನೇ ಸಾಲೀನ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಕುಮಟಾ ತಾಲ್ಲೂಕಿಗೆ ಎರಡು ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದಕ್ಕಾಗಿ ಮಣಕಿ ಮೈದಾನದಲ್ಲಿ ತಾಲ್ಲೂಕಾ ಆಡಳಿತದಿಂದ ನಡೆದ ೭೭ ನೇ ಸ್ವಾತಂತ್ರೊö್ಯÃತ್ಸವ ಆಚರಣಾ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟರು.


ವಿಜ್ಞಾನ ವಿಭಾಗದಲ್ಲಿ ಕು. ರಂಜನಾ ಮಡಿವಾಳ ರಾಜ್ಯಕ್ಕೆ ೯ ನೇ ಸ್ಥಾನ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ, ಕು. ಪ್ರಾಪ್ತಿ ನಾಯಕ ಮತ್ತು ಕು. ಶ್ರೀನಂದಾ ದಿಂಡೆ ದ್ವಿತೀಯ ಸ್ಥಾನ, ಕು. ಶ್ರೀಜನಿ ಭಟ್ ತೃತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕು. ಶ್ರೀಲಕ್ಷಿö್ಮÃ ಶೆಟ್ಟಿ ರಾಜ್ಯಕ್ಕೆ ೧೦ ನೇ ಸ್ಥಾನ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ, ಕು. ಮೆಹರ್ ನಿಯಾಜ್ ಸಯ್ಯದ್ ದ್ವಿತೀಯ ಸ್ಥಾನ, ಕು. ರೋಶನಿ ನಾಯಕ ತೃತೀಯ ಸ್ಥಾನ ಗಳಿಸಿ ಕುಮಟಾ ತಾಲ್ಲೂಕಿಗೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿರುವುದಕ್ಕಾಗಿ ತಾಲ್ಲೂಕಾ ಆಡಳಿತದಿಂದ ಸನ್ಮಾನ ಸ್ವೀಕರಿಸಿದರು.

RELATED ARTICLES  ಕರಾವಳಿ ಭಾಗಕ್ಕೆ ರೆಡ್ ಅಲರ್ಟ : ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.


ನಮ್ಮ ವಿದ್ಯಾರ್ಥಿಗಳ ಈ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದಕ್ಕಾಗಿ ಸಂಸ್ಥೆಯ ಪರವಾಗಿ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕಿರಣ ಭಟ್ಟ ಮತ್ತು ಎಲ್ಲಾ ಉಪನ್ಯಾಸಕ ವೃಂದದವರು ಕುಮಟಾ ತಾಲ್ಲೂಕಾ ಆಡಳಿತ ಮಂಡಳಿಗೆ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

RELATED ARTICLES  ಮಿರ್ಜಾನ ಶಕ್ತಿಕೇಂದ್ರದ ಯಲವಳ್ಳಿ ಈಗ ಸಂಪೂರ್ಣ ಕೇಸರಿಮಯ