ಹೊನ್ನಾವರ : ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ರ ಇಕೋ ಬೀಚ್ ಸಮೀಪ ಭಟ್ಕಳ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಪಲ್ಟಿಯಾಗಿ ಗಟಾರದಲ್ಲಿ ಬಿದ್ದಿದೆ. ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದವರು ಕಾರು ಚಾಲಕನ ಅಜಾಗರುಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

RELATED ARTICLES  ಮನೆಯ ಗೋಡೆ ಕುಸಿದು ಈರ್ವರ ದುರ್ಮರಣ

ಕಾರಿನಲ್ಲಿದ್ದ ಬೆಂಗಳೂರು ಮೂಲದ ಆದಿತ್ಯ, ಶಿಲ್ಪ, ಆಕಾಶ, ತರುಣ, ರೊಹೇಬ್, ಖುಷಿ, ಪವನಕುಮಾರ, ಯಶವಂತ, ಪ್ರೀಯಾಂಕ ಗಾಯಗೊಂಡವರಾಗಿದ್ದಾರೆ. ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಅಂಬುಲೆನ್ನ್ ಮೂಲಕ ಕರೆದೊಯ್ಯಲಾಗಿದೆ. ಈ ಸಂಭದ
ಚಾಲಕನ ವಿರುದ್ಧ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಟೊಂಕ ಮೀನುಗಾರಿಕಾ ಬಂದರಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿದ ಸಿಪಿಐ ಶ್ರೀಧರ್ : ಸ್ಥಳೀಯರಿಂದ ಮೆಚ್ಚುಗೆ