ಕುಮಟಾ : ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಕುಮಟಾ (ಪಿ.ಎಲ್.ಡಿ) ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಇಂದು ನಡೆದಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಭುವನ ಭಾಗ್ವತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕ್ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಇವರು ಎಲ್ಲಾ ನಿರ್ದೇಶಕರ ಒಕ್ಕೊರಲ ಸಮ್ಮತಿಯೊಂದಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಜೊತೆಗೆ ಮೂರೂರಿನ ಜಿ. ಐ ಹೆಗಡೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭುವನ್ ಭಾಗ್ವತ್ ಈ ಹಿಂದಿನ ಅವಧಿಯಲ್ಲಿಯೂ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಜನಮನ್ನಣೆ ಗಳಿಸಿದ್ದರು.
ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಗಣಪತಿ ಈಶ್ವರ ಹೆಗಡೆ ಮೂರೂರು (ಜಿ.ಐ ಹೆಗಡೆ) ಬಿಜೆಪಿ ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿ ಆಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ಇವರೂ ಪಿ.ಎಲ್.ಡಿ ಬ್ಯಾಂಕ್ ಗೆ ಮೂರನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವವರು.
ನೂತನ ನಿರ್ದೇಶಕ ಮಂಡಳಿಯಲ್ಲಿ ಅರುಣ ಸೀತಾರಾಮ ಗುನಗಾ ಬಾಡ, ಶ್ರೀಕಾಂತ ಬೀರ ಪಟಗಾರ ಹೊಲನಗದ್ದೆ, ವೀಣಾ ವಸಂತ ಶೇಟ್ ಕುಮಟಾ, ಮಂಜುನಾಥ ಈರು ಮುಕ್ರಿ ಹಂದಿಗೋಣ, ನಾಗರತ್ನಾ ಅರುಣ ನಾಯ್ಕ ಕೂಜಳ್ಳಿ, ಹರಿಶ್ಚಂದ್ರ ಕೃಷ್ಣ ಭಟ್ಟ ಕಲ್ಲಬ್ಬೆ, ಶಂಭು ದೇವಪ್ಪ ನಾಯ್ಕ ಸಂತೇಗುಳಿ, ಗಣಪತಿ ಗಜಾನನ ಹೆಗಡೆ ಅಂತ್ರವಳ್ಳಿ, ಪ್ರೇಂಕಿ ಸಿಂಜಾವ ಫರ್ನಾಂಡಿಸ್ ದೀವಗಿ, ನಾರಾಯಣ ಶೇಷಗಿರಿ ನಾಯ್ಕ ನಾಗೂರು, ರೋಷನ ಮೋಹನ ನಾಯ್ಕ ಮುಗ್ವೆಖಾನವಾಡಿ, ವಿನಾಯಕ ಮೋಹನ ನಾಯಕ ಹಿರೇಗುತ್ತಿ, ಅನಂತ ನಾಗಪ್ಪ ನಾಯ್ಕ ಗಂಗೆಕೊಳ್ಳ ಆಯ್ಕೆಯಾಗಿದ್ದಾರೆ.