ಕುಮಟಾ : ಕುಮಟಾ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಗೋರೆಯ ಒಟ್ಟು ೬೫ ವಿದ್ಯಾರ್ಥಿಗಳು, ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಬಾಲಕರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಚಿನ್ಮಯ ವಿಷ್ಣು ಭಟ್ಟ ಪ್ರಥಮ ಸ್ಥಾನ, ಶಶಿಧರ ಭಟ್ಟ ತೃತೀಯ ಸ್ಥಾನ, ಸಮರ್ಥ ಸಾತೊಡ್ಡಿ ಐದನೇ ಸ್ಥಾನ ಪಡೆದರೆ ಬಾಲಕಿಯರ ವಿಭಾಗದಲ್ಲಿ ಅರ್ಪಿತಾ ಶಂಭು ಹೆಗಡೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಬಾಲಕರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಚಿನ್ಮಯ ವಿಷ್ಣು ಭಟ್ಟ ಪ್ರಥಮ ಸ್ಥಾನ, ಶಶಿಧರ ಭಟ್ಟ ತೃತೀಯ ಸ್ಥಾನ, ಸಮರ್ಥ ಸಾತೊಡ್ಡಿ ಐದನೇ ಸ್ಥಾನ ಪಡೆದರೆ ಬಾಲಕಿಯರ ವಿಭಾಗದಲ್ಲಿ ಅರ್ಪಿತಾ ಶಂಭು ಹೆಗಡೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

RELATED ARTICLES  ಗ್ರಾಹಕರ ಮಾಹಿತಿ ಕದ್ದ ಸೈಬರ್‌ ವಂಚಕರು!

ಯೋಗ ಸ್ಪರ್ಧೆಯಲ್ಲಿ ಶಶಾಂಕ ಎಸ್ ಗೌಡ ಮತ್ತು ಶ್ರೇಷ್ಠ ಎಸ್ ಗುಡಿಗಾರ ಪ್ರಥಮ ಸ್ಥಾನ ಪಡೆದರೆ, ಸ್ಕಂದ ಭಟ್ಟ ದ್ವಿತೀಯ ಸ್ಥಾನ, ಮನೋಹರ್ ಎಸ್ ಭಟ್ಟ ತೃತೀಯ, ಶರತ್ ಹೆಗಡೆ ನಾಲ್ಕನೇ ಸ್ಥಾನ ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಮೇಧಿನಿ ಕಿರಣ ಭಟ್ಟ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಬ್ಯಾಡ್ಮಿಂಟನ್ ನಲ್ಲಿ ಪೂಜಾ ಅವಧಾನಿ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ೧೦೦ ಮೀ ಮತ್ತು ೨೦೦ ಮೀ. ಓಟದ ಸ್ಪರ್ಧೆಯಲ್ಲಿ ನಯನಾ ಭಟ್ಟ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿರುತ್ತಾರೆ. ೪x೧೦೦ ಮೀ. ರಿಲೇಯಲ್ಲಿ ಧನ್ಯಾ ಮತ್ತು ತಂಡ ಪ್ರಥಮ ಸ್ಥಾನ. ಬ್ಯಾಡ್ಮಿಂಟನ್ ವಿಭಾಗದಲ್ಲಿ ಪೂಜಾ ಅವಧಾನಿ ಹಾಗೂ  ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

RELATED ARTICLES  ಮೊಬೈಲ್ ಅಂಗಡಿಯಲ್ಲಿ ಕಳ್ಳತನ

ಅರವಿಂದ ಹಾಗೂ ತಂಡ ಬಾಲಕರ ವಿಭಾಗದ ಥ್ರೋ ಬಾಲ್‌ನಲ್ಲಿ ದ್ವಿತೀಯ ಸ್ಥಾನ. ಸಿಂಚನಾ ಡಿಸ್ಕ್ ಥ್ರೋ ಸ್ಪರ್ಧೆಲ್ಲಿ ತೃತೀಯ, ನಿತ್ಯಾನಂದ ಜಾವಲಿನ್ ಥ್ರೋ ದಲ್ಲಿ ತೃತೀಯ, ಆಶಿಶ ಉದ್ದ ಜಿಗಿತದಲ್ಲಿ ದ್ವಿತೀಯ, ಪ್ರವೀಣ ಮತ್ತು ಆಶಿಶ ಹರ್ಡಲ್ಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ ಜಿ ಹೆಗಡೆ, ಪ್ರಾಚಾರ್ಯರಾದ ಶ್ರೀ ಡಿ. ಎನ್ ಭಟ್ಟ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.