ಕುಮಟಾ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎ.ಐ.ಸಿ.ಸಿ ಅಧ್ಯಕ್ಷ ನಿವೇದಿತ್ ಆಳ್ವಾ ಕುಮಟಾ ತಾಲೂಕಿನ ಅಘನಾಶಿನಿಗೆ ಬೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ನಾಮಧಾರಿ ಸಭಾಭವನದಲ್ಲಿ ಸೇರಿದ ಗ್ರಾಮಸ್ಥರೊಡನೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿದ ಅವರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಇಲ್ಲಿ ಕೆಲವರ ಮನೆ ಬಂದರು ಇಲಾಖೆಯ ಜಾಗದಲ್ಲಿ ಇದ್ದು, ಇಲಾಖೆಯಿಂದ ಈವರಗೆ ಕಡಿಮೆ ಬಾಡಿಗೆ ವಿಧಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ ವಿಪರಿತ ಹೆಚ್ಚಿನ ಬಾಡಿಗೆಯನ್ನು ವಿಧಿಸುತ್ತಿದ್ದಾರೆ. ಬಡವರಾಗಿರುವ ನಮಗೆ ಹೆಚ್ಚಿನ ಬಾಡಿಗೆ ತುಂಬಲು ಸಾಧ್ಯವಾಗದೇ ತೊಂದರೆಯಲ್ಲಿದ್ದೇವೆ ಎಂದು ಹಲವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೂ ಕೆಲವರು ನಮಗೆ ಭೂ ಸುಧಾರಣಾ ಕಾಯಿದೆಯಡಿ ಭೂಮಿ ಮಂಜೂರಿಯಾಗಿದೆ ಆದರೆ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಎಂದು ಇದ್ದು ನಮಗೆ ಸರಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ ಆದ ಕಾರಣ ಅದನ್ನು ಸರಿಪಡಿಕೊಡುವಂತೆ ವಿನಂತಿಸಿಕೊಂಡರು.
ಜನರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ವಂದಿಸಿದ ನಿವೇದಿತ್ ಆಳ್ವಾ ಸಂಬಂಧಪಟ್ಟ ಅಧಿಕಾರಿಗಳೊಡನೆ ಮಾತನಾಡಿ, ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಭುವನ ಭಾಗ್ವತ್, ರತ್ನಾಕರ ನಾಯ್ಕ, ಆರ್. ಎಚ್, ನಾಯ್ಕ, ವಿ.ಎಲ್. ನಾಯ್ಕ ಹಾಗೂ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಸತೀಶ ನಾಯ್ಕ, ಮತ್ತು ಗ್ರಾಮ ಪಂಚಾಯತ ಸದಸ್ಯರು ಹಾಜರಿದ್ದರು.