ಕುಮಟಾ : ಗಿಡವು ಮರವಾಗಿ ಬಲಿತು ಹೂವು-ಹಣ್ಣುಗಳನ್ನು ನೀಡುವ ಹೊತ್ತಿನಲ್ಲಿ ತಾನು ನೀಡುತ್ತಿರುವುದು ಗಂಡಿಗೋ-ಹೆಣ್ಣಿಗೋ ಎಂದೆಣಿಸದೇ, ಯಾವ ತಾರತಮ್ಯವನ್ನೂ ಮಾಡದೇ ಇಷ್ಟಪಟ್ಟವರಿಗೆ ನೀಡುವ ನಿಸರ್ಗದ ಪಾಠದಲ್ಲಿನ ಸಂದೇಶವನ್ನು ಮನಗಂಡು ಲಿಂಗಬೇಧವನ್ನು ಮರೆತು ಪುರುಷ ಮತ್ತು ಮಹಿಳೆಯರು ಸಮಾಜದಲ್ಲಿ ಒಂದೇ ಭಾವನೆಯಿಂದ ಬೆರೆತು ಬದುಕಬೇಕು ಎಂದು ಪ್ರೌಢಶಾಲಾ ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕರವರು ನುಡಿದರು

ಅವರು ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ  ಶಾಲೆಯಲ್ಲಿ ಸಂಭ್ರಮದ ಶನಿವಾರದಂದು ಹಮ್ಮಿಕೊಂಡ ಲಿಂಗ ಸಮಾನತೆಯ ಕುರಿತಾದ ಇಲಾಖಾ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಗಿಡವೊಂದನ್ನು ನೆಟ್ಟು ಲಿಂಗಬೇಧವಿಲ್ಲದ ಮಾನವ ಸರಪಳಿಯಲ್ಲಿ ಮಾತನಾಡಿದರು.

RELATED ARTICLES  ದೂರವಾಯ್ತು ಬಾಂಬ್ ಆತಂಕ : ಏನಿತ್ತು ಅಲ್ಲಿ?

ಎಳವೆಯಿಂದಲೇ ಗಂಡು – ಹೆಣ್ಣು ಎಂಬ ಬೇಧವಿಲ್ಲದೇ ಸಹೋದರತೆಯ ಭಾವನೆಯಿಂದ ಆಪ್ತವಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಮೇಲು-ಕೀಳು ಎಂಬ ಬೇಧ-ಭಾವವನ್ನು ಮಾಡಕೂಡದು. ಎಲ್ಲರಿಗೂ ಸಮಾನವಾದ ಅವಕಾಶವಿದೆಯೆಂದುಕೊಳ್ಳಬೇಕು ಎಂದರು.

RELATED ARTICLES  ಎಲ್ಲರ ಮನಗೆದ್ದ ಕೃಷ್ಣ ಗೌಡರ ಪೆನ್ಸಿಲ್ ಆರ್ಟ

ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಸರಸ್ವತಿ ನಾಯಕ, ಯಶೋಧಾ ಕೆ.ಬಿ, ಗೀತಾ ನಾಗೇಕರ, ವೀಣಾ ಗಾಂವಕರ,ಕಮಲಾಬಾಯಿ ಭಾಗ್ವತ, ಚಂಪಾವತಿ ನಾಯ್ಕ. ಸಿಬ್ಬಂದಿಗಳಾದ ಫಿರೋಜಖಾನ, ಪುನೀತಕುಮಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಮ್ಯ ಪಟಗಾರ, ದಿಶಾ ಗಾವಡಿ, ನವ್ಯಾ ಗಾವಡಿ, ಎನ್. ನಾಗಲಕ್ಷ್ಮೀ, ಗಜೇಂದ್ರ ಪಟಗಾರ ಹಾಗೂ ಆಕಾಶ ಹರಿಕಂತ್ರ ಮೊದಲಾದವರಿದ್ದರು.