ಅಂಕೋಲಾ : ಅಂಕೋಲಾ ರಾಷ್ಟ್ರೀಯ ಹೆದ್ದಾರಿ
66 ನೀಲಂಪುರ ಕ್ರಾಸ್ ಹತ್ತಿರ ಚಲಿಸುತ್ತಿದ್ದ ಟ್ರಾಲಿ ಲಾರಿಯಿಂದ ಕಬ್ಬಿಣದ ಆ್ಯಂಗಲ್ ಪಟ್ಟಿಗಳು ಸಿಡಿದು ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಅಜ್ಜಿಕಟ್ಟಾ ಶಾಲೆಯ 6ನೇ ವರ್ಗದ ವಿದ್ಯಾರ್ಥಿಗಳಾದ ಹಾವೇರಿ ಜಿಲ್ಲೆಯ ನೆಟ್ಟೂರಿನ ದರ್ಶನ್ ಕೆಂಚಪ್ಪ ಕಂಡೋಜಿ (12)ಮತ್ತು ಡುಮ್ಮಿ ಹಾಳದ ಕಿರಣ ಹನುಮಂತಪ್ಪ ಮೇಗಲಮನೆ (12) ಗಾಯಗೊಂಡವರಾಗಿದ್ದಾರೆ.

RELATED ARTICLES  ಕುಮಟಾದಲ್ಲಿ‌ ಮತ್ತೆ ಕರಾಮತ್ತು ತೋರಿದ ಚೋರರು:36 ತೊಲೆ ಬಂಗಾರ, 2 ಲಕ್ಷ ರೂಪಾಯಿ ದೋಚಿ ಪರಾರಿ

ಮಧ್ಯಾಹ್ನ ಶಾಲೆ ಬಿಟ್ಟ ನಂತರ ಸಹಪಾಠಿಗಳೊಂದಿಗೆ ವಿಠಲಘಾಟ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ರಾ.ಹೆ.66ರ ಪಕ್ಕದ ಮಣ್ಣಿನ ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರವಾರ ಕಡೆಯಿಂದ ಕುಮಟಾ ಕಡೆ ವೇಗವಾಗಿ ಬರುತ್ತಿದ್ದ ಕಬ್ಬಿಣದ ಆ್ಯಂಗಲ್ ಪಟ್ಟಿಗಳನ್ನು ತುಂಬಿಕೊಂಡು ಬರುತ್ತಿದ್ದ ಟ್ರಾಲಿ ಲಾರಿಯಿಂದ ಆ್ಯಂಗಲ್ ಪಟ್ಟಿಗಳು ಸಿಡಿದ ಬಿದ್ದ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬಡಿದಿದೆ.

RELATED ARTICLES  ಕಾಂಗ್ರೆಸ್ ಎಂದರೆ ಮೋಸ ಎನ್ನಿಸಿದೆ : ಶಿವಾನಂದ ಹೆಗಡೆ ಕಡತೋಕಾ

ಗಾಯಗೊಂಡ ವಿದ್ಯಾರ್ಥಿಗಳನ್ನು ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಲಾರಿ ಚಾಲಕ ವಿಜಯ ಬಲಭೀಮ್ ಬಾಲು ಡೊರಲೆ (22) ಮಹಾರಾಷ್ಟ್ರ ಈತನ ವಿರುದ್ಧ
ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಗಾಗಿ ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.