ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕಾರವಾರ ರಸ್ತೆಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರೂ ಯುವಕರು ಗಾಯಗೊಂಡಿರುವ ಘಟನೆ  ನಡೆದಿದೆ. ಈ ಘಟನೆಯಲ್ಲಿ ಹೊಸಕಂಬಿಯ ನಿವಾಸಿ‌ ವಿಶ್ವನಾಥ ಆಗೇರ ಹಾಗೂ ಆತನ ಸ್ನೇಹಿತ ಇಬ್ಬರೂ ಗಾಯಗೊಂಡಿದ್ದಾರೆ. ಬೈಕ್ ಸವಾರರು ತಮ್ಮ ಬೈಕ್ ಅತಿವೇಗವಾಗಿ ಚಲಾಸಿಕೊಂಡು ಹೋಗಿ ನಿಯಂತ್ರಣ ಸಿಗದೆ,ರಸ್ತೆ ಬದಿಯ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಇಬ್ಬರನ್ನು ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ರವಾನಿಸಲಾಗಿದೆ. ಈ ಘಟನೆಯ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಜನಸ್ನೇಹಿ ಪಿಎಸ್‌ಐ ಆನಂದಮೂರ್ತಿಗೆ ಸಿ.ಪಿ.ಐ ಆಗಿ ಬಡ್ತಿ