ಕುಮಟಾ: ಸಾಂಪ್ರದಾಯಿಕ ವೈದ್ಯರು ನಮ್ಮ ರಾಜ್ಯದ ಹೆಗ್ಗಳಿಕೆ, ಅವರ ಕೊಡುಗೆ ಅವಿಸ್ಮರಣಿಯವಾಗಿದೆ. ನಾವೆಲ್ಲರೂ ಔಷಧಿ ಸಸ್ಯಗಳನ್ನು ಉಳಿಸಿ ಬೆಳಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಸರಕಾರದ ಜೀವ ವೈವಿಧ್ಯಮಯ ಮಂಡಳಿ ಅಧ್ಯಕ್ಷರಾದ ಎಸ್.ಪಿ.ಶೇಷಾದ್ರಿ ಹೇಳಿದರು. ಅವರು ಕುಮಟಾದ ಮಣಕಿಯ ಗ್ರಾಮ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾದ 11ನೇ ರಾಜ್ಯ ಪಾರಂಪರಿಕ ವೈದ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗ್ರಾಮ ಒಕ್ಕಲಿಗರ ಸಮುದಾಯ ಭವನದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಆಯುಷ್ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಗ್ರಾಮ ಒಕ್ಕಲಿಗರ ಸಂಘ, ಕುಮಟಾ ಸಂಯುಕ್ತ ಆಶ್ರಯದಲ್ಲಿ 11ನೇ ರಾಜ್ಯ ಪಾರಂಪರಿಕ ವೈದ್ಯ ಸಮ್ಮೇಳನವು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ದೀಪ ಬೆಳಗಿಸುವ ಮೂಲಕ ನೆರವರಿಸಿದ್ರು.

RELATED ARTICLES  ದಿ. ಶ್ರೀಪಾದ ಹೆಗಡೆ ಕಡವೆಯವರ ಸಂಸ್ಮರಣೆ: ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭ.

vlcsnap 2017 10 11 14h56m42s455

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಾ. ಪ್ರಸನ್ನನಾಥ ಸ್ವಾಮಿಜಿಗಳು ಉಪಸ್ಥಿತರಿದ್ದರು.

ಈ ವೇಳೆ ರಾಜ್ಯದ ಎರಡು ಪ್ರಮುಖ ನಾಟಿ ವೈದ್ಯರಿಗೆ ವೈದ್ಯ ರತ್ನ ಎನ್ನುವ ಮಹೊನ್ನತ ಪ್ರಸಸ್ಥಿಯನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರಾದ ಶಾರದಾ ಮೋಹನ ಶೆಟ್ಟಿ ನಾಟಿ ವೈದಕೀಯ ಎನ್ನುವುದು ನಮ್ಮ ಪುರ್ವಜರ ಕಾಲದಿಂದಲೂ ಇದೆ. ಇಂದಿನ ವೈಜ್ಞಾನಿಕಥೆಯ ಕಾಲದಲ್ಲಿಯು ಕೂಡ ನಾಟಿ ವೈದಕೀಯ ತನ್ನದೆ ಆದ ವಿಶೇಷತೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ ಎಂದರು.ಸ್ವಾಮೀಜಿಗಳಾದ ಶ್ರೀ ಡಾ. ಪ್ರಸನ್ನನಾಥ ಸ್ವಾಮಿಜಿ ಗಳು ಮಾತನಾಡಿ ವೈದ್ಯರುಗಳು ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿ ಬಂದಿರುವ ಅರ್ಧರಷ್ಟು ಖಾಯಿಲೆಯನ್ನ ಶಮನ ಮಾಡುತ್ತದೆ. ಮನುಷ್ಯನಾದವನು ಪಂಚಕೋಶಗಳನ್ನು ನಿಯಂತ್ರಿಸಿಕೊಂಡರೆ ಪರಮಾನಂದ ಪ್ರಾಪ್ತಿಯೆಂದು ಶಾಸ್ತ್ರ ಹೇಳಿದೆ. ಆದ್ದರಿಂದ್ ಅನ್ನ.ಪ್ರಾಣ,ಮನಸ್ಸು,ವಿಜ್ಞಾನ,ಆನಂದದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಈ ಬಗ್ಗೆ ಯಾವುದೆ ಪುಸ್ತಕಗಳು ಮಾಹಿತಿ ನೀಡುವುದಿಲ್ಲ. ಅದೇ ರೀತಿ ಜ್ಯೋತಿಷ್ಯವು ಕೂಡ ಸುಳ್ಳಲ್ಲ ಅದು ಸಂಖ್ಯಾಶಾಸ್ತ್ರವಾಗಿದೆ. ಆದರೆ ಹೊಟ್ಟೆಪಡಿಗೆ ಮಾಡುವ ಕೆಲವರ ಜ್ಯೋತಿಷ್ಯ ನಿಜವಾದ ಜ್ಯೋತಿಷ್ಯವನ್ನು ಸುಳ್ಳಾಗಿಸಿದೆ. ನಕಲಿ ಎನ್ನುವುದು ಎಲ್ಲಾ ವಿಭಾಗದಲ್ಲಿಯು ಇದೆ ಅದು ನಮ್ಮಲ್ಲಿಯು ಇದೆ ಎಂದರು. ಜೊತೆಗೆ ನಮ್ಮ ತಾಲೂಕಿನ ಮೇಧನಿ ಗ್ರಾಮದಲ್ಲಿ ದೊರೆಯುವ ಔಷದಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದ್ರು.

RELATED ARTICLES  ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿ ರವಿ ಕೆ ಶೆಟ್ಟಿ ಕವಲಕ್ಕಿ ನೇಮಕ.