ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-೩ ರ ಸಾಪ್ಟ್ ಲ್ಯಾಂಡಿಂಗ್ ಯಶಸ್ವಿಯಾಗಲಿ ಎಂದು ದೀಪವನ್ನು ಹಿಡಿದು ತಾಯಿ ಸರಸ್ವತಿಯಲ್ಲಿ ಪ್ರಾರ್ಥನೆ ಮಾಡಿ ಸರಸ್ವತಿ ಮೂರ್ತಿಯ ಎದುರು ವೃತ್ತಾಕಾರದಲ್ಲಿ (ಪೂರ್ಣ ಚಂದಿರನ ಆಕಾರದಲ್ಲಿ) ದೀಪವನ್ನು ಬೆಳಗಿಸುವದರ ಮೂಲಕ ಪ್ರಾರ್ಥಿಸಿದರು.

RELATED ARTICLES  ಚಿನ್ನದ ಆಭರಣದ ಜೊತೆಗೆ ಗಣಪತಿ ವಿಸರ್ಜಿಸಿದರು... ಮುಂದೇನಾಯ್ತು ಗೊತ್ತಾ?

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕಿರಣ ಭಟ್ಟರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಹೆಗಡೆಯವರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಬಸ್ ಡಿಕ್ಕಿ: ಪಾದಚಾರಿ ದೇಹ ಛಿದ್ರ ಛಿದ್ರ.