ಶಿರಸಿ:ನಗರದ ಅಯೋಧ್ಯಾ ಕಾಲೋನಿಯಲ್ಲಿ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ, ಮನೆಯೊಳಗೆ ನುಗ್ಗಿದ ಕಳ್ಳರು ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಬಂಗಾದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ನಗರದ ಅಶ್ವಿನಿ ಸರ್ಕಲ್ ಬಳಿಯ ಅಯೋಧ್ಯಾ ಕಾಲೋನಿಯ ಆಶೀಶ ವಿಲಾಸ ಲೋಖಂಡೆ ಎಂಬುವವರಿಗೆ ಸೇರಿದ ಮನೆಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಕಟರ್‌ನಿಂದ ಕತ್ತರಿಸಿ, ಒಳನುಗ್ಗಿ 26 ಗ್ರಾಂ ತೂಕದ 1.45 ಲಕ್ಷ ರೂ. ಮೌಲ್ಯದ ಬಂಗಾರದ ನೆಕ್ಸಸ್, 48 ಗ್ರಾಂ ತೂಕದ 1.45 ಲಕ್ಷ ರೂ. ಮೌಲ್ಯದ ಬಂಗಾರದ ಲಾಕೆಟ್ ಇರುವ ರೋಪ್ ಚೈನ್, 23 ಗ್ರಾಂ ತೂಕದ 56 ಸಾವಿರ ರೂ. ಮೌಲ್ಯದ 2 ಬಂಗಾರದ ಬಳೆಗಳು, 400 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಬೆಳ್ಳಿ ತಂಬಿಗೆ, 500 ಗ್ರಾಂ ತೂಕದ 25 ಸಾವಿರ ರೂ. ಮೌಲ್ಯದ ಆರತಿ ಸೆಟ್, 100 ಗ್ರಾಂ ತೂಕದ 5 ಸಾವಿರ ರೂ. ಮೌಲ್ಯದ ಬೆಳ್ಳಿ ಕಾಮಾಕ್ಷಿ ದೀಪ, 60 ಗ್ರಾಂ ತೂಕದ 3 ಸಾವಿರ ರೂ. ಮೌಲ್ಯದ ಬೆಳ್ಳಿಲೋಟ, ಚಮಚಾ, ದೇವರ ಕೋಣೆಯ ಕಾಣಿಕೆ ಡಬ್ಬದಲ್ಲಿದ್ದ 4 ಸಾವಿರ
ರೂ. ನಗದು ಒಟ್ಟೂ 97 ಗ್ರಾಂ ಬಂಗಾರದ ಆಭರಣಗಳು, 1,060 ಗ್ರಾಂ ಬೆಳ್ಳಿಯ ದೇವರ ಪೂಜಾ ಸಾಮಗ್ರಿಗಳು ಹಾಗೂ 4 ಸಾವಿರ ರೂ. ನಗದು ,ಅಂದಾಜು ಒಟ್ಟೂ 5.28000ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು
ಹಿಂದಿನ ಬಾಗಿಲಿನ ಕೀಯನ್ನು ಕಟರ್‌ನಿಂದ ಕಟ್ ಮಾಡಿ ಓಡಿಹೋಗಿದ್ದಾರೆ ಎಂದು ದೂರು ದಾಖಲಾಗಿದೆ.
ಹುಬ್ಬಳ್ಳಿಯಿಂದ ಫಾರೆನ್ಸಿಕ್ ತಂಡದ ಅಧಿಕಾರಿ ಡಾ.ಮಹಾಂತೇಶ, ಉ.ಕ ಜಿಲ್ಲಾ ಸೋಕೋ ಸೀನ್ ಆಫ್ ಕೈಂ ಅಧಿಕಾರಿ ವಿನುತಾ, ಕಾರವಾರದ
ಬೆರಳಚ್ಚು ತಂಡದ ಪಿ.ಎಸ್.ಐ ರಾಘು ನಾಯ್ಕ ಪರಿಶೀಲಿಸಿದ್ದಾರೆ. ಶಿರಸಿ ಡಿ.ಎಸ್.ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿ.ಪಿ.ಐ
ರಾಮಚಂದ್ರ ನಾಯಕ, ಗ್ರಾಮೀಣ ಠಾಣೆಯ ಪಿ.ಐ ಸೀತಾರಾಮ.ಪಿ, ಹೊಸ ಮಾರುಕಟ್ಟೆ ಪಿ.ಎಸ್.ಐಗಳಾದ ರತ್ನಾ ಕುರಿ, ಮಾಲಿನಿ ಹಾಸಬಾವಿ, ನಗರ ಠಾಣೆಯ ಪಿ.ಎಸ್.ಐ ರಾಜಕುಮಾರ, ಮಹಾಂತೇಶ ಕುಂಬಾರ, ಗ್ರಾಮೀಣ ಠಾಣೆಯ ಪಿ.ಎಸ್.ಐಗಳಾದ ದಯಾನಂದ ಜೋಗಳೇಕರ, ಪ್ರತಾಪ್, ನುರಿತ ಅಪರಾಧ ತನಿಖಾ ಸಿಬ್ಬಂದಿಗಳಾದ ಮಹಾಂತೇಶ ಕುಂಬಾರ, ಪ್ರತಾಪ ಪಚ್ಚಪ್ಪಗೋಳ, ದಯಾನಂದ್ ಜೋಗಳೇಕರ್ ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದಾರೆ. ಅಲ್ಲದೇ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.