ಕುಮಟಾ: ಜನಸಂಖ್ಯೆಯ ಶೇ. 3 ರಷ್ಟು ಮಂದಿಗೆ ಬುದ್ಧಿಮಾಂದ್ಯತೆ ಇದೆ. ಮುದ್ಧಿಮಾಂದ್ಯತೆಗೆ ಹಲವಾರು ಕಾರಣಗಳಿದ್ದು, ಪೋಷಕರೇ ಹೊಣೆಯಾಗಿರುವುದಿಲ್ಲ. ಆ ಬಗ್ಗೆ ಅವರಲ್ಲಿ ಖಿನ್ನತೆ ಬೇಡ. ಮಕ್ಕಳಿಗೆ ಇರುವ ಬುದ್ಧಿಯನ್ನೇ ಬಳಸಿ, ವ್ಯವಸ್ಥಿತ ತರಬೇತಿ ಕೊಟ್ಟರೆ ಈ ಮಕ್ಕಳು ಉತ್ತಮಗೊಳ್ಳುತ್ತಾರೆ. ಸ್ವಾವಲಂಬಿಗಳಾಗಿ ಬದುಕುತ್ತಾರೆ. ಅವರನ್ನು ಮುಖ್ಯವಾಹಿನಿಯಲ್ಲಿ ತರಬಹುದೆಂದು ಡಾ. ಎ. ವಿ. ಬಾಳಿಗಾ ಕಾಲೇಜಿನ ಮನಶ್ಯಾಸ್ತ್ರ ಉಪನ್ಯಾಸಕ ಪ್ರಮೋದ ನಾಯ್ಕ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ ಮಾನಸಿಕ ಆರೋಗ್ಯ ಅರಿವಿನ ಕಾರ್ಯಕ್ರಮದ ನಿಮಿತ್ತ ವಿಶೇಷ ಚೇತನ, ಬುದ್ಧಿಮಾಂದ್ಯ ಮಕ್ಕಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬುದ್ಧಿಮಾಂದ್ಯತೆ ಎಲ್ಲ ಸ್ವರೂಪಗಳನ್ನು, ಅವರನ್ನು ನೋಡಿಕೊಳ್ಳುವ ಮಾನವೀಯ ಹೃದಯಗಳ ಮಿಡಿತವನ್ನು ಉದಾಹರಣೆಗೊಂದಿಗೆ ವಿವರಿಸಿದರು. ಅಲ್ಲದೇ ಪ್ರಸ್ತುತ ವೈದ್ಯ ವಿಜ್ಞಾನ ಬುದ್ಧಿಮಾಂದ್ಯ ಮಕ್ಕಳು ಜನಿಸದಂತೆ ಸೂಕ್ತ ಚಿಕಿತ್ಸೋಪಾಯಗಳನ್ನು ಕಂಡಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ಎನ್ ಆರ್ ಗಜು, ಬುದ್ಧಿಮಾಂದ್ಯತೆ  ಒಂದು ಜ್ವಲಂತ ಸಾಮಾಜಿಕ ಸಮಸ್ಯೆಯಾಗಿದ್ದು, ಅದರ ತಡೆಗಟ್ಟುವಿಕೆ, ಸೂಕ್ತ ವಸತಿ, ವಿಶೇಷ ಅಗತ್ಯತೆ ಪೂರೈಕೆಯೊಂದಿಗೆ ವಿಶೇಷ ಶಿಕ್ಷಣ, ಔದ್ಯೋಗಿಕ ತರಬೇತಿ, ಉದ್ಯೋಗಾವಕಾಶಗಳ ಸೃಷ್ಠಿಯೊಂದಿಗೆ   ಆತ್ಮವಿಶ್ವಾಸ ತುಂಬುವುದು ಸರ್ಕಾರ ಸೇರಿದಂತೆ ಪ್ರತಿಯೊಬ್ಬರ ಹೊಣೆ. ವಿಶ್ವದಾದ್ಯಂತ ಪಸರಿಸಿರುವ  ರೋಟರಿ ಜಗತ್ತಿನಲ್ಲಿ ಹೊಸ ಭರವಸೆ ನೀಡುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರಾರಂಭದಲ್ಲಿ ಪವನ ಶೆಟ್ಟಿ ರೋಟರಿ ಸಂಪ್ರದಾಯದಂತೆ ಅಧ್ಯಕ್ಷರಿಗೆ ಕಂಠಪಟ್ಟಿ ತೊಡಿಸಿದರು. ಒಂದು ನಿಮಿಷ ಜಾಗತಿಕ ಶಾಂತಿಗಾಗಿ ಮೌನಪ್ರಾರ್ಥನೆ ಸಲ್ಲಿಸಿ, ರಾಷ್ಟ್ರಗೀತೆ ಹಾಡಲಾಯಿತು.  ರೋಟರಿಯ ಧ್ಯೇಯವಾಕ್ಯವನ್ನು ಜೈವಿಠ್ಠಲ ಕುಬಾಲ ಹೇಳಿಕೊಟ್ಟರು. ಸಹಕಾರ್ಯದರ್ಶಿ ಫ್ರ್ಯಾಂಕಿ ಫರ್ನಾಂಡಿಸ್ ವರದಿ ವಾಚಿಸಿದರು. ಕೋಶಾಧಿಕಾರಿ ಸಂದೀಪ ನಾಯಕ ಪರಿಚಯಿಸಿದರು. ಎಜಿ ವಸಂತ ರಾವ್ ಸದಸ್ಯರಾದ ಜಯಶ್ರೀ ಕಾಮತ, ಕಿರಣ ನಾಯಕ, ಶೈಲಾ ಗುನಗಿ ಮಾತನಾಡಿದರು. ಪ್ರಮುಖವಾಗಿ ರೋಟರಿ ಪರಿವಾರದ ಡಾ. ಡಿ.ಡಿ.ನಾಯಕ, ಸುರೇಶ ಭಟ್, ಜಿ.ಜೆ.ನಾಯ್ಕ, ಚೇತನ್ ಶೇಟ್, ವಸಂತ ಶಾನಭಾಗ, ಎಲ್. ಎಸ್. ನಾಯ್ಕ.  ದೀಪಾ ನಾಯಕ, ಸುಮಾ ನಾಯ್ಕ, ಲೋಹಿತ್ ನಾಯ್ಕ, ಗುರುರಾಜ  ಶೆಟ್ಟಿ, ವ್ಯಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದು ಚಂದ್ರಯಾನ ಯಶಸ್ಸಿನ ಸಂಭ್ರವನ್ನೂ ಆಚರಿಸಿದರು.
RELATED ARTICLES  ಕೈಬಿಟ್ಟ ಕಾಂಗ್ರೆಸ್ : ಶಾರದಾ ಶೆಟ್ಟಿ ಪಕ್ಷೇತರ ಸ್ಪರ್ಧೆ ಘೋಷಣೆ.