ಕುಮಟಾ : ಪ್ರೌಢಶಾಲೆಗಳ ಮಿರ್ಜಾನ ವಲಯ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಸ್ಥಳೀಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯಮೋಘ ಪ್ರದರ್ಶನ ನೀಡಿ ವೈಯಕ್ತಿಕ ವೀರಾಗ್ರಣಿ ಹಾಗೂ ಸಮಗ್ರ ವೀರಾಗ್ರಣಿಯೊಂದಿಗೆ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕೀಯರ ವೈಯಕ್ತಿಕ ವಿಭಾಗದಲ್ಲಿ ಸುಪ್ರಿಯಾ ಶಂಕರ್ ಗೌಡ- 100 ಮೀಟರ್ ಓಟ, 200 ಮೀ. ಓಟ ಹಾಗೂ 400 ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದಿರುತ್ತಾಳೆ. ರುಚಿ ಎಂ.ನಾಯ್ಕ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ ಸ್ಥಾನ, ಕುಮಾರಿ ವರ್ಷಿಣಿ ಜಿ ಹೆಗಡೆ ಭರ್ಚಿ ಎಸೆತ ದ್ವಿತೀಯ ಸ್ಥಾನ, ಪ್ರತೀಕ್ಷಾ ಡಿ. ಭಂಡಾರಿ ಗುಂಡು ಎಸೆತ – ದ್ವಿತೀಯ ಸ್ಥಾನ, ಆಶ್ವೀಜ ಅಂಬಿಗ ಉದ್ದ ಜಿಗಿತ ತೃತೀಯ ಸ್ಥಾನ ಹಾಗೂ ಬಾಲಕಿಯರ ವಾಲಿಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅಂತೆಯೇ ಬಾಲಕರ ವಿಭಾಗದಲ್ಲಿ ಜೀವನ್ ಆರ್. ನಾಯ್ಕ – ಚಕ್ರ ಎಸೆತ ಪ್ರಥಮ ಸ್ಥಾನ, ಸರಪಳಿ ಗುಂಡು ಎಸೆದಲ್ಲಿ ಪ್ರಥಮ ಸ್ಥಾನ, ಎಚ್. ಡಿ. ನಿರಂಜನ್ – ಗುಂಡು ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ ಸ್ಥಾನ. ಕುಮಾರ್ ನಾಗರಾಜ್ ಕೆ ನಾಯ್ಕ ಭರ್ಚಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಅಲ್ಲದೇ ಬಾಲಕರ ಥ್ರೋಬಾಲ್ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅರುಣ ನಾಯ್ಕ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯಾಧ್ಯಾಪಕರು, ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದ ತುಂಬು ಹೃದಯದಿಂದ ಅಭಿನಂದಿಸಿದೆ.