ಕುಮಟಾ : ತಾಲೂಕಿನಲ್ಲಿ ಈ ಹಿಂದೆ ಒಮ್ಮೆಲೇ ಸುರಿದ ಮಳೆಯಿಂದ ಅಡಿಕೆ ಬೆಳೆಗೆ ಕೊಳೆಯ ರೋಗ ಬಾಧಿಸಿದ್ದು, ಇದರಿಂದ ಬೆಳೆಯನ್ನು ನಂಬಿಕೊಂಡಿದ್ದ ರೈತರ ಪರಿಸ್ಥಿತಿ ಅತಂತ್ರವಾಗಿದೆ. ಕೊಳೆ ರೋಗದ ಬಾಧೆಯಿಂದ ಅಡಿಕೆ ಉದುರುತ್ತಿದ್ದು, ಬೆಳೆಗಾರ ಕಂಗಾಲಾಗಿದ್ದಾನೆ.

ಒಮ್ಮೆ ಸುರಿದ ಮಳೆ ಮತ್ತೆ ಮಾಯವಾಗಿ, ಸರಿಯಾದ ಮಳೆ ಬೀಳದೆ ನೀರು ಇಲ್ಲದೆ ಇರುವುದರಿಂದ ಭತ್ತ ಬೆಳೆಗಾರ ಕಂಗಾಲಾಗಿದ್ದಾನೆ. ತಾಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಬೆಳೆಯನ್ನೇ ನಂಬಿಕೊಂಡು ಹಲವಾರು ರೈತರು, ಸೇವಾ ಸಹಕಾರಿ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಬೆಳೆ ಸಾಲ ಮಾಡಿ ಜೀವನ ನಿರ್ವಹಿಸುತ್ತಿದ್ದು ಅಡಿಕೆ ಬೆಳೆ ಕೈಗೆ ಸಿಗದೇ ಇರುವುದರಿಂದ ಮುಂದೆ ಸಾಲ ತೀರಿಸುವುದು ಹೇಗೆ ಎಂಬ ಭಯ ಅವರನ್ನು ಕಾಡುತ್ತಿದೆ.

RELATED ARTICLES  ಸ್ವಚ್ಛತಾ ಕಾರ್ಯಕ್ರಮ ಸಂಪನ್ನ.

ಹೀಗಾಗಿ ಈ ಕೂಡಲೇ ಜಿಲ್ಲಾಧಿಕಾರಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಬಿದ್ದ ಮಳೆಯ ವರದಿಯನ್ನು ತಯಾರಿಸಿ ನಷ್ಟವಾದ ತೋಟಗಳಿಗೆ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರ ನಷ್ಟ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ನೀಡಲು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಜಿ.ಪಂ ಸದಸ್ಯ ಗಜಾನನ ನಾಗೇಶ ಪೈ ವಿನಂತಿಸಿದ್ದಾರೆ.

RELATED ARTICLES  ಕುರುಚಲು ಗಿಡದ ಬಳಿ ಮಹಿಳೆಯ ಮೃತದೇಹ ಪತ್ತೆ