ಕುಮಟಾ : ಲಾರಿಯ ಬ್ಯಾಟರಿಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜು ೨೪ ರ ರಾತ್ರಿ ಅವಧಿಯಲ್ಲಿ ಕುಮಟಾದ ಕತಗಾಲ ಕಪ್ಪೆಗುಳಿಯಲ್ಲಿರುವ ಆರ್.ಎನ್ ಶೆಟ್ಟಿ ಇನಪ್ರಾಸ್ರ್ಟಕ್ಟರ್ ಲಿ. ಕಂಪನಿಯ ಸೈಟ್ ನಲ್ಲಿ ನಿಂತಿದ್ದ ಎರಡು ಲಾರಿಯ 60 ಸಾವಿರ ಬೆಲೆಯ 4  ಬ್ಯಾಟರಿ ಕದ್ದೋಯ್ದ ಬಗ್ಗೆ  ಕಂಪನಿಯ ಸೈಟ್ ಇಂಜಿನಿಯರ್ ಗಿಬ್ಸನ್ ಸ್ಟ್ಯಾನ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಕುಮಟಾ ಪಿಎಸ್ಐ ನವೀನ ನಾಯ್ಕ ಮತ್ತು ಪಿಎಸ್ಐ ಪದ್ಮಾ ದೇವಳಿ ಇವರ ತಂಡ ಇಬ್ಬರು ಆರೋಪಿಗಳಾದ ಪ್ರಸಾದ ನಾಗರಾಜ ಮುಕ್ರಿ ಕತಗಾಲ, ಮಣಿಕಂಠ ತಿಮ್ಮಪ್ಪ ಮುಕ್ರಿ ಕತಗಾಲ ಇವರನ್ನು ಬಂಧಿಸಿದ್ದಾರೆ.

RELATED ARTICLES  ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸುವ ಕಲೆ ಯಕ್ಷಗಾನ-ಸಂತೋಷ ಗೂರೂಜಿ

ಬಂಧಿತರಿಂದ ಕಳ್ಳತನವಾದ 4 ಬ್ಯಾಟರಿ, ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡು ದಸ್ತಗಿರಿ ಮಾಡಿದ್ದಾರೆ. ಆರೋಪಿತರನ್ನು ಕುಮಟಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

ಉತ್ತರ ಕನ್ನಡ ಎಸ್ .ಪಿ ವಿಷ್ಣುವರ್ಧನ್ ಮತ್ತು ಅಡಿಷನಲ್ ಎಸ್.ಪಿ ಸಿ.ಟಿ ಜಯಕುಮಾರ್, ಭಟ್ಕಳ ಡಿ.ವಾಯ್.ಎಸ್.ಪಿ ಶ್ರೀಕಾಂತ  ಮತ್ತು  ಕುಮಟಾ ಇನ್ಸ್ಪೆಕ್ಟರ್  ತಿಮ್ಮಪ್ಪ ನಾಯಕರ ಮಾರ್ಗದರ್ಶನದಲ್ಲಿ ಕುಮಟಾ ಪಿಎಸ್ಐ ನವೀನ ನಾಯ್ಕ ಮತ್ತು ಪಿಎಸ್ಐ ಪದ್ಮಾ ದೇವಳಿ ತನಿಖೆ ನಡೆದಿದ್ದು ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ ಮತ್ತು ಪ್ರದೀಪ ನಾಯಕ ಸಹಕರಿಸಿದರು. ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಪೊಲೀಸರಿಗೆ ಇಲಾಖೆ ಬಹುಮಾನ ಘೋಷಿಸಿದೆ.

RELATED ARTICLES  ಒಂದು ಸೆಂ.ಮೀ ಎತ್ತರದ ಚಿನ್ನದ ವಿಶ್ವಕಪ್ ತಯಾರಿಸಿ ಗಮನ ಸೆಳೆದ ಹೊನ್ನಾವರದ ಪ್ರಸನ್ನ.