ಕುಮಟಾ : ಪಟ್ಟಣದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಮಹಾಸತಿ ದೇವಿಗೆ ಶ್ರಾವಣದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ದಂಡಾವಳಿ ಸಹಿತ ಪುಷ್ಪಾಲಂಕಾರ ಪೂಜೆ ನಡೆಸಲಾಯಿತು. ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಭಕ್ತಿಯಿಂದ ಪೂಜೆ, ಹಣ್ಣು ಕಾಯಿ ಪೂಜಾ ಸೇವೆ ಸಮರ್ಪಿಸಿದರು. ಭಕ್ತಜನ ರಕ್ಷಕಿ ಎಂದೇ ಬಿರುದಾಂಕಿತ ಶ್ರೀ ಮಹಾಸತಿ ದೇವಿ ತನ್ನನ್ನು ನಂಬಿ ಬಂದವರನ್ನು ಪೊರೆಯುತ್ತಾಳೆ ಹಾಗೂ ಇಷ್ಟಾರ್ಥ ಸಿದ್ಧಿಸುತ್ತಾಳೆ ಎಂಬ ನಂಬಿಕೆ ಭಜಕರಲ್ಲಿದೆ.
ಇಲ್ಲಿ ಶ್ರಾವಣಮಾಸದ ನಿತ್ಯವೂ ಭಕ್ತಾಧಿಗಳು ಬಂದು ವಿವಿಧ ಹರಕೆ ಸಲ್ಲಿಸುವುದು ಹಾಗೂ ಪೂಜೆಗಳನ್ನು ನಡೆಸುವುದು ಸಾಮಾನ್ಯ. ಶುಕ್ರವಾರದ ವಿಶೇಷವಾಗಿ ದಂಡಾವಳಿ ಸಹಿತ ಪುಷ್ಪಾಲಂಕಾರ ಕಣ್ಮನ ಸೆಳೆಯುವಂತಿತ್ತು.