ಕುಮಟಾ : ಹನುಮಂತ ವಾಸುದೇವ ಬೆಣ್ಣೆ ಅವರ 105ನೇ ಜನ್ಮ ದಿನಾಚರಣೆ ನಿಮಿತ್ತ ಬೆಣ್ಣೆ ಕುಟುಂಬವು ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜ್‍ಗೆ 30 ಖುರ್ಚಿ ಹಾಗೂ ಭೌತಶಾಸ್ತ್ರ ಉಪಕರಣಗಳನ್ನು ದೇಣಿಗೆ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆಯಿತು.  ಪಟ್ಟಣದ ಹೆರವಟ್ಟಾದ ಹನುಮಂತ ವಾಸುದೇವ ಬೆಣ್ಣೆ ಅವರ 105ನೇ ಜನ್ಮ ದಿನಾಚರಣೆಯನ್ನು ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಆಚರಿಸಿದ ಬೆಣ್ಣೆ ಕುಟುಂಬದವರು, ಹನುಮಂತ ವಾಸುದೇವ ಬೆಣ್ಣೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.
ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಆನಂದು ನಾಯ್ಕ ಅವರು, ಈ ಕಾಲೇಜ್ ಜಾಗ ಅರಣ್ಯ ಇಲಾಖೆಯ ವಶದಲ್ಲಿದ್ದಾಗ ಕಾಲೇಜ್ ಹೆಸರಿಗೆ ಜಾಗವನ್ನು ಪರಿವರ್ತನೆ ಮಾಡಿಕೊಳ್ಳಲು ಅಗತ್ಯವಾದ 12 ಲಕ್ಷ ರೂ ಹನುಮಂತ ಬೆಣ್ಣೆ ಕುಟುಂಬವೇ ಭರಣ ಮಾಡಿತ್ತು. ಅಂದಿನಿಂದ ಇಂದಿನ ವರೆಗೂ ಕಾಲೇಜ್‍ನ ಅಭಿವೃದ್ಧಿ ಕಾರ್ಯಕ್ಕೆ ಆ ಕುಟುಂಬ ನಮಗೆ ನೆರವು ನೀಡುತ್ತ ಬಂದಿದೆ ಎಂದರು.
ಈ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಕಾಲೇಜ್ ಪ್ರಭಾರಿ ಪ್ರಾಂಶುಪಾಲ ಆರ್ ಎಚ್ ನಾಯ್ಕ ಅವರು, ಕಾಲೇಜ್‍ಗೆ ಬೆಣ್ಣೆ ಕುಟುಂಬದ ಸಹಕಾರವನ್ನು ಸ್ಮರಿಸಿ, ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಣ್ಣೆ ಕುಟುಂಬದ ಮಂಗಲಾ ಅಶೋಕ ಶಾನಭಾಗ ಗೋವಾ, ಸುರೇಖಾ ಅಚ್ಯುತ್ ಬಾಳಗಿ ಮುಂಬೈ, ಅಶೋಕ ಶಾನಭಾಗ, ವಿನಾಯಕ ನಾಯಕ ಬೆಣ್ಣೆ, ವಿದ್ಯಾ ನಾಯಕ ಬೆಣ್ಣೆ, ಪ್ರಥಮ ನಾಯಕ ಬೆಣ್ಣೆ, ಸಂಧ್ಯಾ ಗೋಳಿ, ಕಾಲೇಜ್ ಉಪನ್ಯಾಸಕರು ಇದ್ದರು.
RELATED ARTICLES  ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಅವಕಾಶಗಳನ್ನು ನೀಡಬೇಕು : ರಾಜೇಂದ್ರ ಭಟ್ಟ.