ಕುಮಟಾ:ಕರ್ನಾಟಕ ಸರಕಾರದ ಮಿನುಗಾರ ಮಹಿಳೆಯರಿಗಾಗಿ ರೂಪಿಸಿರುವ ಮತ್ಸ್ಯ ಮಹಿಳಾ ಸ್ವಾವಲಂಬನೆ ಯೋಜನೆಡಿಯಲ್ಲಿ ಮೀನು ಮಾರಟಮಾಡುವ ಮಹಿಳೆಯರ ಸಂಘಕ್ಕೆ ಸಹಾಯ ಹಣ ವಿತರಿಸುವ ಕಾರ್ಯಕ್ರಮವನ್ನು ಕುಮಟಾ ತಾಲೂಕಾ ಶಾಸಕರ ಮನೆಯಲ್ಲಿ ಆಯೋಜಿಸಲಾಗಿತ್ತು.

ಈ ವೇಳೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಉಪಸ್ಥಿತರಿದ್ದರು. ಮತ್ತು ಉತ್ತರ ಕನ್ನಡ ಜಿಲ್ಲಾ ಮೀನು ಮಾರಟಗಾರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಭಾಗಿಯಾಗಿದ್ರು. ತಾಲೂಕಿನ 18 ಮಹಿಳಾ ಮೀನುಗಾರ ಸಂಘಗಳಿಗೆ ತಲಾ ಒಂದು ಲಕ್ಷದಂತೆ ಚೆಕ್ ವಿತರಿಸಲಾಯಿತು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ವಿಶ್ವ ಯೋಗ ದಿನಾಚರಣೆ-2019

ತಾಲೂಕಿನ ವಿವಿಧ ಕಡೆಯ ಮಿನುಗಾರ ಮಹಿಳೆಯರು ಆಗಮಿಸಿ ತಮ್ಮ ತಮ್ಮ ಹಣವನ್ನು ಸ್ವೀಕರಿಸಿದ್ರು.ಬಳಿಕ ಮಾತನಾಡಿದ ಶಾಸಕರು ನಮ್ಮ ಸರಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಈ ಯೋಜನೆಯು ಒಂದಾಗಿದೆ. ನಮ್ಮ ಸರಕಾರ ಯಾವಗಲೂ ನಿಮ್ಮ ಪರವಾಗಿದೆ. ಮುಂದಿನ ದಿನದಲ್ಲಿಯು ನೀವು ನಮ್ಮ ಸರಕಾರದ ಯೋಜನೆಗಳನ್ನು ಮರೆಯಬಾರದು ಎಂದರು..

RELATED ARTICLES  ಉತ್ತರಕನ್ನಡದಲ್ಲಿ ಒಂದು 396 ಕೋವಿಡ್ ಕೇಸ್ ದಾಖಲು.