ಕಾರವಾರ: ನಗರದ ಹರಿದೇವ ನಗರದಲ್ಲಿ ಆಟವಾಡುತ್ತಿದ್ದ ಮಗು ಆಯತಪ್ಪಿ ನಗರಸಭಾ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಇಂದು ಶನಿವಾರ ಮಧ್ಯಾಹ್ನ ನಡೆದಿದೆ. ಸ್ತುತಿ (3) ಮೃತಪಟ್ಟ ಹೆಣ್ಣು ಮಗು ಸೂರಜ್ ಬಂಟ್‌ ಹಾಗೂ ವಿನುತ ಎಂಬ ದಂಪತಿಗಳ ಮಗುವಾಗಿದ್ದು, ಗಣಪತಿ ಮೂರ್ತಿ
ಎಂದು ಭಾವಿಸಿಕೊಂಡು ಮಣ್ಣನ್ನು ಸಾರ್ವಜನಿಕ ಬಾವಿಯಲ್ಲಿ ಹಾಕಲು ಹೋಗಿದ್ದ ಮಗು ಆಯಾ ತಪ್ಪಿ ಬಾವಿಗೆ ಬಿದ್ದು ಘಟನೆ ನಡೆದಿದೆ.

RELATED ARTICLES  ಕುಮಟಾ ಪಿ.ಎಸ್.ಐ ಇನ್ನಿಲ್ಲ : ಅನಾರೋಗ್ಯದಿಂದ ಕೊನೆಯುಸಿರು.

ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿ ರಸ್ತೆ ಪಕ್ಕದಲ್ಲೇ ಇದ್ದು ಇದಕ್ಕೆ ಕಟ್ಟಿದ ಕಟ್ಟೆ ತುಂಬಾ ಕೆಳಮಟ್ಟದ್ದಾಗಿದ್ದು ಬಾವಿ ಕಟ್ಟೆಯನ್ನು ಎತ್ತರ ಕಟ್ಟದೇ ಇರುವುದೇ ಘಟನೆಗೆ ಕಾರಣವಾಗಿದೆ. ಮನೆಯಲ್ಲಿದ್ದ ಮಗುವನ್ನು ಆಟವಾಡಲು ಹೊರಗಡೆ ಬಿಟ್ಟಿದ್ದು ಇದೀಗ ಮಗುವಿನ ಪ್ರಾಣವೇ ಹೋಗುವಂತಾಗಿದೆ. ಇನ್ನೂ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES  ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ.