ಮುಂಡಗೋಡ: ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಣೆ ಮಾಡಿ ಸ್ಥಳಿಯರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಒಪ್ಪಿಸಿದ ಘಟನೆ ನಡೆದಿದೆ.
ಆಹಾರವನ್ನು ಅರಸಿ ಸನವಳ್ಳಿ ಗ್ರಾಮದ ಕಡೆ ಬಂದ ಜಿಂಕೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಂದ ಜಿಂಕೆ ಮರಿಯನ್ನು ನಾಯಿಗಳು ದಾಳಿ ಮಾಡಿವೆ. ಇದನ್ನು ನೋಡಿದ ಅಲ್ಲಿಯ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳಿಯರಾದ ಕಿರಣ ಗುಬ್ಬಕ್ಕನವರ, ಶರೀಫ ಆರೆಗೋಪ್ಪ, ಪರಶುರಾಮ ಮಟ್ಟಿಮನಿ, ಮಲ್ಲಯ್ಯ ಹಿರೇಮಠ, ರಾಜು ಕಲಕೇರಿ ರುದ್ರಪ್ಪ ಅಂದಲಗಿ ಹಾಗೂ ಕೋಣನಕೇರಿ ಇವರು ತಕ್ಷಣವೇ ನಾಯಿ ದಾಳಿಯಿಂದ ರಕ್ಷಣೆ ಮಾಡಿದ್ದಾರೆ.

RELATED ARTICLES  ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಕುಮಟಾ ಸಹಾಯಕ ಆಯುಕ್ತರಿಗೆ ಮನವಿ

ನಾಯಿಗಳು ಜಿಂಕೆ ಮರಿಗೆ ದಾಳಿ ಮಾಡಿ ಕಾಲು ಹೊಟ್ಟೆ ಹಾಗೂ ತೋಡೆಯ ಭಾಗಕ್ಕೆ ಕಡಿದು ಗಾಯಗೊಳಿಸಿವೆ. ಕೂಡಲೇ ಅರಣ್ಯ ಸಿಬ್ಬಂದಿಗಳಿಗೆ ಪೋನ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ರಾಜು ಎಂಬುವರು ಜಿಂಕೆ ಮರಿಯನ್ನು ಟಾಟಾ ಎಸ್ ವಾಹನದಲ್ಲಿ ಜಿಂಕೆ ಮರಿಯನ್ನು ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿ ಮರಳಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

RELATED ARTICLES  ಶಾಸಕರ ಆಪ್ತ ಕಾರ್ಯದರ್ಶಿ ಅಶೋಕ ಭಟ್ಟರಿಗೆ ತಹಶೀಲ್ದಾರರಾಗಿ ಮುಂಬಡ್ತಿ