ಕುಮಟಾ: ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಗಣೇಶ ಪ್ರಕಾಶ  ಗುನಗಾ, ರೋಶನ ರಮೇಶ ಪಟಗಾರ, ದರ್ಸ್ಮಿತಾ ಈಶ್ವರ ಹರಿಕಂತ್ರ ಹಾಗೂ ಚೇತನಾ ನಾಗೇಶ ಹರಿಕಂತ್ರರವರು ೨೦೨೦-೨೧ನೇ ಸಾಲಿನ ಕೇಂದ್ರೀಯ  ಸಂಸ್ಕೃತ ವಿಶ್ವವಿದ್ಯಾಲಯದ ಶಿಷ್ಯ ವೇತನಕ್ಕೆ ಆಯ್ಕೆಗೊಳಿಸಿ ಶಿಷ್ಯ ವೇತನದ ಪ್ರಭಾರಾಧಿಕಾರಿಗಳಾದ ಡಾ.ಸುನೀತಾರವರು ಪಟ್ಟಿಯನ್ನು ಪ್ರಕಟಿಸಿರುತ್ತಾರೆ.
ಈ ಸಂಬಂಧ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ರೂ ೫೦೦೦/- ನಗದನ್ನು ಅವರ ಬ್ಯಾಂಕ ಖಾತೆಗೆ ನೇರವಾಗಿ ಜಮಾಗೊಳಿಸಲಾಗಿರುತ್ತೆದೆಯೆಂದು ಅವರು ತಿಳಿಸಿರುತ್ತಾರೆ.
ಸಂಸ್ಕೃತ ಕಲಿಕೆಯನ್ನು ಪೋತ್ಸಾಹಿಸುವ ಸದುದ್ದೇಶದಿಂದ ಮೆರಿಟ್ ಪೂರ್ವದ ವಿದ್ಯಾರ್ಥಿಗಳಿಂದ ಪಿ.ಎಚ್.ಡಿವರಗೆ ಸಂಸ್ಕೃತವನ್ನು ಆಯ್ದು ಅಭ್ಯಸಿಸುವ ರಾಷ್ಟ್ರೀಯ  ಮಟ್ಟದಲ್ಲಿ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೇಂದ್ರೀಯ  ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷವೂ ಶಿಷ್ಯ ವೇತನವನ್ನು ನೀಡಲಾಗುತ್ತಿದ್ದು, ಇದಕ್ಕೆ ತಮ್ಮ  ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅರ್ಹರಾಗಿರುವ ಬಗ್ಗೆ ಶಾಲಾ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕರವರು ಹೆಮ್ಮೆಪಟ್ಟಿದ್ದು, ಶಿಷ್ಯವೇತನಕ್ಕೆ ಭಾಜನರಾದ ನಾಲ್ವರು ಸಂಸ್ಕೃತ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಸಂಸ್ಕೃತವನ್ನು ಬೋಧಿಸಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ ಬರ್ಗಿಯವರನ್ನು ಅಭಿನಂದಿಸಿದ್ದಾರೆ.
೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲೆ, ಬರ್ಗಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಕೇವಲ ಪರಿಮಾಣಾತ್ಮಕವಲ್ಲದೇ ಗುಣಾತ್ಮಕವಾಗಿಯೂ ಪ್ರತಿಶತ ೧೦೦ ರಷ್ಟು  ಫಲಿತಾಂಶದ ಸಾಧನೆಯನ್ನು ತೋರಿದ ಕುರಿತು ಧಾರವಾಡದ ಆಯುಕ್ತಾಲಯದ ಡಾ. ಎಮ್.ಎಚ್. ಕಟ್ಟಿಮನೆ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಪಂಡಿತ ಗಲಗಲಿ ಪ್ರಶಸ್ತಿಗೆ ಸಂಸ್ಕೃತ  ಅಧ್ಯಾಪಕರಾದ ಮಂಜುನಾಥ ಗಾಂವಕರ ಬರ್ಗಿಯವರು ಭಾಜನರಾಗಿರುವುದನ್ನು ಸ್ಮರಿಸಬಹುದಾಗಿದೆ.

RELATED ARTICLES  ಇಂದಿನ(ದಿ-04/02/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ