ತಿರುಪತಿ : ಆಂಧ್ರ ಪ್ರದೇಶದ ಮುಖ್ಯಮಂತ್ರಿ ತಿರುಪತಿ ದೇವಾಲಯದ ನೂತನ ಆಡಳಿತ ಮಂಡಳಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಆಂಧ್ರಪ್ರದೇಶದಲ್ಲಿರುವ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ, (ಟಿಟಿಡಿ)ಯ ನೂತನ ಆಡಳಿತ ಮಂಡಳಿಯನ್ನು ಶುಕ್ರವಾರ ರಚಿಸಲಾಗಿದೆ. 24 ಸದಸ್ಯರ ಪಟ್ಟಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಿಡುಗಡೆ ಮಾಡಿದ್ದಾರೆ.
ಈ ಪಟ್ಟಿನಲ್ಲಿ ಕರ್ನಾಟಕದ ಸಚಿವ ಆರ್.ವಿ ದೇಶಪಾಂಡೆ ಮತ್ತು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ನೇಮಿಸಲಾಗಿದೆ. ವಿಶ್ವನಾಥ್ ಈ ಹಿಂದೆಯೂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.