ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಸರ್ಕಲ್ ಹತ್ತಿರ ಟಯರ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪರಿಣಾಮ 4 ಲಕ್ಷಕ್ಕೂ ಅಧಿಕ ಮೌಲ್ಯದ ಟಯರ್ ಸುಟ್ಟು
ಕರಕಲಾದ ಘಟನೆ ನಡೆದಿದೆ. ಪ್ರಕಾಶ ಗೌಡ ಎಂಬುವರಿಗೆ ಸೇರಿದ್ದ ಟೈಯರ್ ಅಂಗಡಿ ಇದಾಗಿದ್ದು, ವಿವಿಧ ವಾಹನದ ಟಯರ್ ಗಳನ್ನು ಮಾರಾಟ ಮಾಡುವ ಮಳಿಗೆ . ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.