ಕಾರವಾರ : ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ವಾಹನವನ್ನು ತಡೆದು ಗೋವುಗಳನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿರುವ
ಘಟನೆ ನಡೆದಿದೆ.

ನೌಕಾನೆಲೆ ಸೀಬರ್ಡ್ ಯೋಜನಾ ಪ್ರದೇಶದಿಂದ ನಕಲಿ ಅನುಮತಿ ಪತ್ರವನ್ನು ಪಡೆದು, ಅರಗಾದ ನೇವಲ್ ಬೇಸ್ ನಿಂದ 18 ಗೋವುಗಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಇದನ್ನು ನೋಡಿದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಚೆಂಡಿಯಾ ಗ್ರಾ.ಪಂ ಸದಸ್ಯರು ಹಾಗೂ
ಅಂಕೋಲಾ ಭಾಗದ ಗೋಪ್ರೇಮಿ ಸಂಘದ ಸದಸ್ಯರು ಲಾರಿಯನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ
ಗೋವುಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

RELATED ARTICLES  ಬೈಕ್ ಗೆ ಹಿಂಬದಿಯಿಂದ ಬಡಿದು ಸವಾರನ ಕಾಲಿನ ಮೇಲೆ ಹರಿದ ಟ್ರಕ್..!

ಈ ಗೋವುಗಳನ್ನು ಕಾರವಾರದ ಅರಗಾರದಿಂದ ಗುಲ್ಬರ್ಗಾ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾರವಾರ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದು,18 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಈ ಅಕ್ರಮ ಜಾನುವಾರು ಸಾಗಾಟದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

RELATED ARTICLES  4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ.