ಕಾರವಾರ : ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತೀ ಉದ್ದದ ಹಾಗೂ ಹೆಚ್ಚು ತೂಕದ ಬಂಗಡೆ ಮೀನು ಮೀನುಗಾರರ ಬಲೆಗೆ ದೊರೆತಿದೆ. ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ದೊರೆತಿದ್ದು ಈ ಮೀನನ್ನು ವಿನಾಯಕ್ ಹರಿಕಾಂತ್ರರವರು ಕರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ.
ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು ಒಂದು ಕೆಜಿ ತೂಕವಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪಕ್ಕೆ ವಿಶೇಷ ಮೀನುಗಳು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸುವುದು ಬಲು ವಿಶೇಷ.
ಬಂಗಡೆ ಮೀನು ಹೆಚ್ಚು ಎಂದರೆ 300 ಗ್ರಾಮ್ ವರೆಗೆ ತೂಕವಿರುತ್ತದೆ. ಗಂಡು ಬಂಗುಡೆ 36 cm , ಹೆಣ್ಣು ಬಂಗುಡೆ 42 cm ಅತೀ ದೊಡ್ಡದು ಭಾರತದಲ್ಲಿ ವರದಿಯಾಗಿತ್ತು. ಆದ್ರೆ ಕಾರವಾರದಲ್ಲಿ ಸಿಕ್ಕ ಈ ಬಂಗುಡೆ 48 cm ಇದೆ ಹಾಗಾಗಿ ಇದು ಅತೀ ದೊಡ್ಡ ಮೀನು ಎನ್ನಲಾಗಿದೆ.