ಕುಮಟಾ : ಮೂಲತಃ ಕುಮಟಾ ತಾಲೂಕು ಮಲ್ಲಾಪುರದವರಾಗಿದ್ದು, ಕೆಲ ವರ್ಷಗಳಿಂದ ಹೆರವಟ್ಟಾದಲ್ಲಿ ಸ್ವಂತ ಮನೆ ಮಾಡಿಕೊಂಡು ನೆಲೆಸಿದ್ದ, ವೃತ್ತಿಯಲ್ಲಿ ಟೇಲರ್ ಆದ ಪಟ್ಟಣದ ನೆಲ್ಲಿಕೇರಿಯಲ್ಲಿ ‘ಲೀಸ್ ಡ್ರೆಸೆಸ್’ ಹೆಸರಿನಲ್ಲಿ ಹಲವು ವರ್ಷಗಳಿಂದ ಸ್ವಂತ ಟೇಲರಿಂಗ್ ಹಾಗೂ ಜವಳಿ ಅಂಗಡಿ ನಡೆಸುತ್ತಿದ್ದ ಸುರೇಶ ಮಾಸ್ತಿ ಭಂಡಾರಿ (58) ಇವರು ರವಿವಾರ ಹೃದಯಾಘಾತದಿಂದ ಉಸಿರುಚೆಲ್ಲಿದರು.
ವೃತ್ತಿಯಲ್ಲಿ ಟೇಲರ್ ಆದ ಇವರು, ಜನಾನುರಾಗಿಯಾಗಿದ್ದು ಹಲವು ಸಾಮಾಜಿಕ ಸೇವೆಯಲ್ಲಿ ತೊಡಿಸಿಕೊಂಡು ಸದಾ ಚಟುವಟಿಕೆಯಿಂದಿದ್ದವರು. ಕುಮಟಾ ದಲ್ಲಿನ ಭಂಡಾರಿ ಸಮಾಜದ ಯೋಧಾ ಕೋ ಒಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ, ಭಾರತೀಯ ಕುಟುಂಬ ಯೋಜನಾ ಸಂಘದ ಕುಮಟಾ ಘಟಕದ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದ ಇವರು, ಪತ್ನಿ ಹಾಗೂ ಇಂಜನಿಯರ ಆಗಿರುವ ಓರ್ವ ಪುತ್ರ, ಓರ್ವ ಪುತ್ರಿಯನ್ನಗಲಿದದ್ದಾರೆ. ಇವರು ಅಪಾರ ಸ್ನೇಹಿತ ವೃಂದ ಹೊಂದಿದ್ದವರು.
ಇವರ ಸಾವಿಗೆ ಹಿತೈಷಿ ಮಿತ್ರರುಗಳಾದ ವಿನಾಯಕ ಶೆಟ್ಟಿ, ರಾಧಾಕೃಷ್ಣ ರೈ, ಸಂದೀಪ ಕೆ, ಕೆ.ಎಮ್ ನಾಯ್ಕ, ಜಯದೇವ ಬಳಗಂಡಿ, ಕಿರಣ ಭಂಡಾರಿ ಸೇರಿದಂತೆ ಹಲವರು ಕಂಬನಿಮಿಡಿದಿದ್ದಾರೆ.