ಹೊನ್ನಾವರ : ತಾಲೂಕಿನ ಮಂಕಿ ಅನಂತವಾಡಿ ಜಡ್ಡಿ ಕ್ರಾಸ್ ಹತ್ತಿರ ಸ್ಕೂಟಿ ಮತ್ತು ಲಾರಿ ನಡುವೆ ವಾರದ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ ಮಂಕಿಯ ಶಾರಶ್ವತ ಕೇರಿಯ ಕಾರ್ತಿಕ್ ನಾಯ್ಕ ಎಂಬ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕ ಹೊನ್ನಾವರದ ಎಸ್ ಡಿ ಎಂ. ಕಾಲೇಜಿನ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಮೃತನ ಅಂತ್ಯಕ್ರಿಯೆ ಭಾನುವಾರ ನಡೆದಿದೆ. ಯುವಕನ ಅಕಾಲಿಕ ನಿಧನಕ್ಕೆ ಆತನ ಸ್ನೇಹಿತರು, ಸಹಪಾಠಿಗಳು, ಊರಿನವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.