ದಾಂಡೇಲಿ: ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಮಹಾವಿದ್ಯಾಲಯಕ್ಕೆ ಹೂವು ಮತ್ತು ಲೇಖನಿ ನೀಡಿ ಪ್ರೀತಿಯಿಂದ ಸ್ವಾಗತಿಸುವುದು ಉತ್ತಮ ಸಂಸ್ಕøತಿಯಾಗಿದೆ. ಇದು ಮಹಾವಿದ್ಯಾಲಯದ ಆವರಣದಲ್ಲಿ ಪ್ರೀತಿ ಸ್ನೇಹ ಹಾಗೂ ಕುಟುಂಬ ವಾತವಾರಣ ನಿರ್ಮಾಣಕ್ಕೆ ಮಹತ್ವದ ಅಡಿಗಲ್ಲಾಗಿದೆ. ಸಾಮೂಹಿಕ ಕಲಿಕೆಗೆ ಆರೋಗ್ಯಪೂರ್ಣ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಪ್ರೊ.ಎಸ್.ವಿ.ಚಿಂಚನಿ ಅವರು ಅಭಿಪ್ರಾಯಪಟ್ಟರು. ಅವರು ಬುಧವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

RELATED ARTICLES  ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್..!

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಡಿ.ಒಕ್ಕುಂದ ಅವರು ವ್ಯಕ್ತಿ ಹಾಗೂ ವ್ಯಕ್ತಿತ್ವಗಳ ನಿರ್ಮಾಣ ಶಿಕ್ಷಣ ಸಂಸ್ಥೆಗಳ ಪ್ರಮುಖ ಉದ್ಧೇಶ. ಪಠ್ಯ ಬೋಧನೆ ವ್ಯಕ್ತಿಗಳನ್ನು ನಿರ್ಮಾಣ ಮಾಡಿದರೆ ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವಗಳನ್ನು ರೂಪಿಸುತ್ತವೆ. ವ್ಯಕ್ತಿಗಳು ನಾಶವಾಗಬಹುದು ವ್ಯಕ್ತಿತ್ವಗಳು ಶಾಶ್ವತ. ವಿದ್ಯಾರ್ಥಿಗಳನ್ನು ವ್ಯಕ್ತಿತ್ವಗಳನ್ನಾಗಿ ರೂಪಿಸಲು ಸಾಮೂಹಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಸಮಾಲೋಚನಾ ಸಭೆಯಲ್ಲಿ ಡಾ.ಎಂ.ಎನ್.ಜಂಗೂಬಾಯಿ, ಡಾ.ಬಸವರಾಜ ಅಕ್ಕಿ, ಡಾ.ವಿನಯಾ ನಾಯಕ, ಸುನಿತಾ ಎಂ.ಜೋಗ್, ನಿಷಾತ್ ಷರೀಫ್, ಮಂಜುನಾಥ ಚಲುವಾದಿ. ಡಾ.ಲಕ್ಷ್ಮಿಬಾಯಿ ಕಬಾಡಿ ಮಾತನಾಡಿ ವಿವಿಧ ವಿಷಯವಾರು ಹಾಗೂ ಪಠ್ಯೇತರ ವಿಭಾಗಗಳ ಮೂಲಕ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ನೀಲ ನಕ್ಷೆಯನ್ನು ನೀಡಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯಯನ್ನು ಪಡೆದರು.

RELATED ARTICLES  ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಜಿ.ಎಸ್. ನಾಯ್ಕ

ಅಮೃತಾ ಅಗಸಿಮನಿ ಹಾಗೂ ಅಕ್ಷತಾ ತಡಸ ಕಾರ್ಯಕ್ರಮ ನಿರೂಪಿಸಿದರು. ಹೀನಾಕೌಸರ್ ನದಾಫ ಸ್ವಾಗತಿಸಿದರು. ಅಶ್ವಿನಿ ಎಸ.ಪಿ. ವಂದಿಸಿದರು. ಸೌಮ್ಯಾ,ಕಾಂಚನಾ,ಪಾಯಲ್ ಮನೀಷಾ, ತುಕಾರಂ ಮೊದಲಾದವರು ಭಾವಗೀತೆಗಳನ್ನು ಹಾಡಿದರು.