ಕುಮಟಾ : ಸೋಮವಾರ ರಾತ್ರಿ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿದ್ದು, ಸಮೀಪದ ಮನೆಯ ಆರ್ ಟಿ ಓ ಒಫಿಸ್ ಹೋಮ್ ಗಾರ್ಡ್ ಗಣೇಶ್ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು.
ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿರುತ್ತದೆ. ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಸಿಕ್ಕಿರುತ್ತದೆ.
ನಂತರ ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದ್ದು. ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ. ಡಿ ಎಫ್ ಓ ಶ್ರೀ ರವಿಶಂಕರ್, ಏಸಿಎಫ್ ಶ್ರೀ ಜಿ ಲೋಹಿತ್, ಆರ್ ಎಪ್ ಓ ಶ್ರೀ ಎಸ್ ಟಿ ಪಟಗಾರ್, ಡಿ ಆರ್ ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು.
ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕರಾದ ಗೋಪಿ ಜೊಲಿಯವರು ತಮ್ಮ ಕೆಮರಾದಲ್ಲಿ ಸೆರೆಹಿಡಿದಿದ್ದಾರೆ.