ಹೊನ್ನಾವರ : ತಾಲೂಕಿನ ಕಾಸರಗೋಡಿನ ಶರಾವತಿ ನದಿ ಸೇರುವ ಸಂಗಮಪ್ರದೇಶದಲ್ಲಿ ಮೀನುಗಾರ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಸಂಭವಿಸಿದೆ. ಕಾಸರಕೋಡನ ಇಬ್ಬರು
ಮೀನುಗಾರರು ದೋಣಿ ಮೂಲಕ ಮೀನುಗಾರಿಕೆ
ತೆರಳಿದಾಗ ಆಕಸ್ಮಿಕವಾಗಿ ದೋಣಿ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಪೈಕಿ ಪ್ರಜ್ವಲ್ ಮಾಬ್ಲ ಖಾರ್ವಿ(19) ನಾಪತ್ತೆಯಾದ ಯುವಕನಾಗಿದ್ದು, ಇನೊರ್ವ ಮೀನುಗಾರರಾದ ರಾಜು ಶೇಷಗಿರಿ ತಾಂಡೇಲ್ ಅಪಾಯದಿಂದ ಪಾರಾಗಿದ್ದಾರೆ.
ನಾಪತ್ತೆಯಾದ ಯುವಕನ ಪತ್ತೆಗಾಗಿ ಅಗ್ನಿಶಾಮಕ ಪೊಲೀಸ್ ಸಿಬ್ಬಂದಿಗಳು ಮತ್ತು ಮೀನುಗಾರರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.