ಕುಮಟಾ : ವೈದ್ಯಕೀಯ ಶಿಕ್ಷಣ ಪಡೆದು, ನಂತರದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ಪ್ರಶಾಂತ ಆಯುರ್ವೇದಾಲಯದಲ್ಲಿ ವಿಶೇಷ ತರಬೇತಿ ಪಡೆದು ತನ್ನ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಡಾ.ಮೇಧಾ ಹೆಗಡೆ ಪಟ್ಟಣದ ಹೆಸರಾಂತ ದಾಮೋದರ್ ಕ್ಲಿನಿಕ್‍ನಲ್ಲಿ ಇಂದಿನಿಂದ ವೈದ್ಯಕೀಯ ಸೇವೆಗೆ ಲಭ್ಯ ಇರಲಿದ್ದಾರೆ.
ಡಾ. ಮೇಧಾ ಹೆಗಡೆ ಅವರು ಆಯುರ್ವೇದ ಪದ್ದತಿಯಿಂದ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಬೊಜ್ಜು ಕರಗಿಸುವಿಕೆ, ಲಿವರ್ ಸಮಸ್ಯೆ, ಕಿಡ್ನಿ ಸಮಸ್ಯೆಗಳ ಬಗ್ಗೆ ವಿಶೇಷ ಚಿಕಿತ್ಸೆ ನೀಡುತ್ತಿದ್ದು ತಾಲೂಕಿನ ಹಾಗೂ ಜಿಲ್ಲೆಯ ಜನರು ಇದರ ಲಾಭ ಪಡೆಯುವಂತೆ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.