ಕುಮಟಾ: ಕಡ್ಲೆಯ ಗಾಂಧಿವನದಲ್ಲಿ ನಡೆದ ಬಾಡ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಂದೇಶ ದತ್ತಾ ಪಟಗಾರ ನೇತೃತ್ವದ ವಿದ್ಯಾರ್ಥಿಗಳ ಕಬ್ಬಡ್ಡಿ ತಂಡ ಕೆ.ಪಿ.ಎಸ್. ನೆಲ್ಲಿಕೇರಿ ತಂಡದೊಂದಿಗೆ ಫೈನಲ್ ಪಂದ್ಯದಲ್ಲಿ ಜಯಶಾಲಿಯಾಗಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ.
ಇನ್ನುಳಿದಂತೆ ಲಂಬೋದರ ಈಶ್ವರ ಗೌಡ ನೇತೃತ್ವದ ಥ್ರೋಬಾಲ್ ಹಾಗೂ ರಿಲೇ ತಂಡ ಬೆಳ್ಳಿಯ ಪದಕಕ್ಕೆ ಭಾಜನವಾಯಿತು. ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯಾ ಪಟಗಾರ ಗುಂಡು ಎಸೆತ, ಪವನ ಪಟಗಾರ ಚೆಸ್ ನಲ್ಲಿ ಪ್ರಥಮ ಸ್ಥಾನ ಹಾಗೂ ಶ್ರೇಯಾ ಪಟಗಾರ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಜೊತೆಗೆ ಕೃಷ್ಣ ಪಟಗಾರ 400 ಮೀ. ಓಟದಲ್ಲಿ ತೃತೀಯ, ಸಾತ್ವಿಕ ನಾಯ್ಕ ಭರ್ಜಿ ಎಸೆತದಲ್ಲಿ ತೃತಿಯ ಸ್ಥಾನವನ್ನುಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯಾಧ್ಯಾಪಕರು ಹಾಗೂ ಸರ್ವ ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.