ಕುಮಟಾ : ಜಗತ್ತಿನ ಎಲ್ಲಾ ಭಾಷೆಗಳ ಶಬ್ದ ಭಂಡಾರಕ್ಕಿಂತ ಅತ್ಯಂತ ಶ್ರೀಮಂತ ಶಬ್ದ ಭಂಡಾರವನ್ನು ಹೊಂದಿರುವ ಯಾವುದಾದರೂ ಒಂದು ಭಾಷೆ ಇದ್ದರೆ ಅದು ಸಂಸ್ಕೃತ ಭಾಷೆಯಾಗಿದೆ. ಸಂಸ್ಕೃತ ಭಾಷೆಯ ಶಬ್ದ ಭಂಡಾರವನ್ನು ಯಾವ ಭಾಷೆಯ ಶಬ್ದ ಭಂಡಾರವೂ  ಸರಿಗಟ್ಟಲು ಸಾಧ್ಯವಿಲ್ಲ. ಈ ವಿಷಯವನ್ನು ಅರಿತು ಇಂಗ್ಲೆಂಡ್ ಮತ್ತು ಐರ್ಲಾಂಡ್ ದೇಶದ ಆಯ್ದ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸಲಾಗಿದೆ. ಜರ್ಮನ್ ನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನ ಮಾತ್ರವಲ್ಲ, ಸಂಶೋಧನೆಗಳು ಕೂಡ ನೆಡೆಯುತ್ತಿವೆ, ನಮ್ಮ ಭಾರತದಲ್ಲೂ ಎಲ್ಲೆಡೆ ಇನ್ನಷ್ಟು ಅಧ್ಯಯನ-ಸಂಶೋಧನೆಗಳು ನೆಡೆಯಲಿ ಎಂದು ಡಾ.ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಡಾ.ಶಂಕರ ಭಟ್ಟ ನುಡಿದರು.

RELATED ARTICLES  ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದ ಕುಮಟಾದ ಶಿಕ್ಷಕ ರಂಗಾ ಪಟಗಾರ.

    ಅವರು ಕುಮಟಾ ನೆಲ್ಲಿಕೇರಿ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವಕಾಲೇಜಿನಲ್ಲಿ ಸಂಸ್ಕೃತ ಸಪ್ತಾಹದ ನಿಮಿತ್ತ ನೆಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಾ, ಸಂಸ್ಕೃತ ಭಾಷೆಯಲ್ಲಿರುವ ಸಾಹಿತ್ಯ ಸವಿಯನ್ನಷ್ಟೇ ನಾವು ಸವಿದಿದ್ದೇವೆ, ಆದರೆ ಸಂಸ್ಕೃತ ಭಾಷೆಯಲ್ಲಿ ವಿಜ್ಞಾನದ ಹಲವು ಸಂಗತಿಗಳು ಹುದುಗಿದ್ದು, ಅವುಗಳ ಸಂಶೋಧನೆಗಳು ನೆಡೆಯಬೇಕಿದೆ.

ಸಂಸ್ಕೃತದಲ್ಲಿರುವ ವಿಜ್ಞಾನದ ಕುರಿತು ಸಂಶೋಧನೆಗಳು ನೆಡೆದಲ್ಲಿ, ಭಾರತವು ಜಗತ್ತಿಗೇ ತಂತ್ರಜ್ಞಾನವನ್ನು ನೀಡುವ ದೇಶವಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಆಗ ಭಾರತವನ್ನುತಂತ್ರಜ್ಞಾನದಲ್ಲಿ ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಸ್ಕೃತಭಾಷೆಯಲ್ಲಿರುವ ವೈದ್ಯಕೀಯಶಾಸ್ತç, ಖಗೋಳಶಾಸ್ತç ಮುಂತಾದ ಶಾಸ್ತ್ರಗಳ ಸಂಶೋಧನೆ ಕುರಿತು ಹೆಚ್ಚೆಚ್ಚು ಪ್ರಯತ್ನಗಳಾಗಬೇಕು, ಸಂಸ್ಕೃತ ಭಾಷೆಯ ಸಾಧ್ಯತೆಗಳ ಕುರಿತು ನಾವು ತರೆದುಕೊಳ್ಳಬೇಕು ಎಂದರು.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಆರ್ ಹೆಚ್ ನಾಯ್ಕ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಂಸ್ಕೃತ ಭಾಷೆಯ ಪುನರುತ್ಥಾನವಾಗಬೇಕು, ಅದರ ಸೊಬಗು ಎಲ್ಲೆಡೆ ಹರಡಲಿ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅನನ್ಯಾ ಭಟ್ಟ ಪ್ರಾರ್ಥಿಸಿದಳು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಗಣೇಶ ಭಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಸಿದರು. ರಸಾಯನಶಾಸ್ತ್ರ ಉಪನ್ಯಾಸಕ ಆನಂದ ವೈ ನಾಯ್ಕ ವಂದಿಸಿದರು.